Melur, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮನವರ 36ನೇ ವರ್ಷದ ಹಸಿಕರಗವು ವಿಜೃಂಭಣೆಯಿಂದ ನಡೆಯಿತು.
ವಹ್ನಿಕುಲ ಕ್ಷತ್ರಿಯರ ಟ್ರಸ್ಟ್ ವತಿಯಿಂದ ನಡೆಸುವ ಹಸಿ ಕರಗವನ್ನು ಸಿದ್ಧಣ್ಣನವರ ಮಗ ಎಂ.ಎಸ್.ಅಭಿಲಾಷ್ ಹೊತ್ತಿದ್ದರು. ಗ್ರಾಮವನ್ನೆಲ್ಲಾ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ರಂಗೋಲಿಗಳನ್ನು ರಚಿಸಿಕರಗ ಬಂದಾಗ ಮಲ್ಲಿಗೆ ಹೂಗಳನ್ನು ಚೆಲ್ಲಿದರು. ಕರ್ಪೂರ ಬೆಳಗಿ ತೆಂಗಿನಕಾಯಿ ಹೊಡೆದು ಪೂಜೆ ಸಲ್ಲಿಸಿದರು. ಗ್ರಾಮದ ಎಲ್ಲಾರಸ್ತೆಗಳಲ್ಲೂ ನಾದಸ್ವರ, ಮಂಗಳವಾದ್ಯ ಹಾಗೂ ತಮಟೆಯ ನಾದದೊಂದಿಗೆ ಕರಗ ಹಾಗೂ ಗ್ರಾಮದೇವತೆಗಳ ಮುತ್ತಿನ ಪಲ್ಲಕ್ಕಿಗಳುಸಂಚರಿಸಿದವು.
ಆರತಿ ದೀಪೋತ್ಸವ, ಕಲ್ಯಾಣೋತ್ಸವ, ವಸಂತೋತ್ಸವ ಹಾಗೂ ಮಹಾ ಮಂಗಳಾರತಿ ನಡೆಯಿತು. ಅನ್ನಸಂತರ್ಪಣೆ ಮತ್ತು ಪ್ರಸಾದವಿನಿಯೋಗ ನಡೆಯಿತು. ಸುತ್ತ ಮುತ್ತಲಿನ ಗ್ರಾಮಸ್ಥರು ಕರಗ ಮಹೋತ್ಸವದಲ್ಲಿ ಭಾಗಿಯಾಗಿದ್ದರು.