ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಗುರುವಾರ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವನ್ನು ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ವಿಶೇಷವಾಗಿ ಆಚರಿಸಿದರು.
ಅಪ್ಪು ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು. ಪುನೀತ್ ಭಾವಚಿತ್ರವಿರುವ ಬೆಳ್ಳಿ ರಥವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಅತ್ಯಂತ ಹಿರಿಯರಿಂದ ಪುಟ್ಟ ಮಕ್ಕಳವರೆಗೆ ಹಾಗೂ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕೇಕ್ ಕತ್ತರಿಸಿದ್ದಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಿಹಿ ಹಂಚಿದರು. ಪೂಜಾ ಸ್ಥಳದಲ್ಲಿ ನೆರೆದಿದ್ದ ಅಪ್ಪು ಅಭಿಮಾನಿ ಬಳಗಕ್ಕೆ ಸಿಹಿತಿನಿಸುಗಳನ್ನು ಹಂಚಿ, ಗ್ರಾಮಸ್ಥರಿಗೆ ಅನ್ನದಾನವನ್ನು ಮಾಡಲಾಯಿತು. ಗ್ರಾಮದ ಹಿರಿಯರು ವೃದ್ಧರು ಹಾಗೂ ರಾಜ್ ಕುಟುಂಬದ ಅಭಿಮಾನಿಗಳಾದ ಪಾರ್ವತಮ್ಮ, ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಲಕ್ಷ್ಮೀಪತಿ, ಎಸ್.ವಿ. ನಟರಾಜ್, ಎಂ.ಎನ್. ಪ್ರಕಾಶ್ ರವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು. ಸುತ್ತಮುತ್ತಲಿನ ಗ್ರಾಮದವರೂ ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್, ಪಿಡಿಒ ಶಾರದಾ, ಸದಸ್ಯರಾದ ಎಂ.ಕೆ.ರವಿಪ್ರಸಾದ್, ಶಿವಾನಂದ್, ಗಜೇಂದ್ರ ಬಾಬು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಡಾ.ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಧರ್ಮೇಂದ್ರ, ಎಸ್.ಆರ್.ವೆಂಕಟೇಶ್, ಸುದರ್ಶನ್, ಸುಧೀರ್, ರಾಘವೇಂದ್ರ, ಹರೀಶ್ ಕುಮಾರ್, ಎಸ್.ಆರ್.ಶ್ರೀನಿವಾಸ್ ಮೂರ್ತಿ, ಗೋಪಾಲ್, ಹರೀಶ್, ಲಕ್ಷ್ಮೀಕಾಂತ್, ಆನಂದ್, ಎಂ.ಜೆ.ಪ್ರಭಾಕರ್, ರೂಪೇಶ್ ಹಾಜರಿದ್ದರು.