Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಗುರುವಾರ ಶ್ರೀ ನಾಗಲಮುದ್ದಮ್ಮದೇವಿ, ಶ್ರೀ ಮಹಾಗಣಪತಿ ಮತ್ತು ಬಾಲಸುಬ್ರಹ್ಮಣ್ಯ ಸ್ವಾಮಿ ಸ್ಥಿರಬಿಂಬ ಹಾಗೂ ಧ್ವಜಸ್ತಂಭ ಪ್ರತಿಷ್ಠಾಪನಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ದೇವರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, “ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಗಳು ಸನ್ಮಾರ್ಗದ ಹಾದಿಗಳು. ಆತ್ಮೋದ್ಧಾರವಾದಾಗ ಮಾತ್ರ ಸಮಾಜವು ಪ್ರಗತಿ ಕಾಣಲು ಸಾಧ್ಯ” ಎಂದು ಹೇಳಿದರು.
ಗ್ರಾಮದ ಹಿರಿಯರಿಗೆ ಗೌರವ ಸಮರ್ಪಣೆ ಮತ್ತು ಮಹಿಳೆಯರಿಗೆ ತುಳಸಿ ಗಿಡ ವಿತರಿಸಲಾಯಿತು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಮಳ್ಳೂರು ವಿವೇಕಾನಂದ ಆಶ್ರಮದ ಶ್ರೀ ಪೂರ್ಣಾನಂದ ಸ್ವಾಮಿಗಳು, ಶಾಸಕ ಬಿ.ಎನ್.ರವಿಕುಮಾರ್, ಮಾಜಿ ಶಾಸಕ ರಾಜಣ್ಣ, ಪುಟ್ಟಣ್ಣ, ಮಳ್ಳೂರು ಹರೀಶ್, ಬಿ.ಎಮ್.ದೇವರಾಜ್, ಅಮರಣ್ಣ, ವಿ.ಮಧು, ತಾದೂರು ರಘು, ಆರ್.ಎ.ಉಮೇಶ್, ಆಂಜನೇಯರೆಡ್ಡಿ, ಬಿ.ನಾರಾಯಣಸ್ವಾಮಿ, ಎಂ. ಹರೀಶ. ಮುನಿಕೃಷ್ಣಪ್ಪ, ಮುನಿಸ್ವಾಮಿ, ದೇವಾಲಯದ ಭಕ್ತಾದಿಗಳು ಮತ್ತು ಕುಲಸ್ತರು ಹಾಜರಿದ್ದರು.