Sidlaghatta : ಶಿಡ್ಲಘಟ್ಟ ತಾಲ್ಲೂಕು ಮಳ್ಳೂರಿನ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರ, ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಶ್ರಯದಲ್ಲಿ ಅ.27 ರಂದು ಭಾನುವಾರ ಮಳ್ಳೂರು ಗ್ರಾಮದಲ್ಲಿನ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.
ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ.ಸಂದೀಪ್ ಪುವ್ವಾಡ ಈ ಕುರಿತು ಮಾಹಿತಿ ನೀಡಿ, ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಜತೆಗೆ ದಂತ, ಕ್ಯಾನ್ಸರ್ ಮತ್ತು ಹೃದಯ ತಪಾಸಣೆ ಶಿಬಿರ ನಡೆಯಲಿದೆ. ಜತೆಗೆ ಮಕ್ಕಳ ರೋಗ ತಜ್ಞರು, ಸ್ತ್ರೀರೋಗ ತಜ್ಞರು, ನೇತೃ ತಜ್ಞರು ಮತ್ತು ಚರ್ಮ ರೋಗ ತಜ್ಞರು ಆಗಮಿಸಲಿದ್ದು ತಪಾಸಣೆ ಮತ್ತು ಔಷದೋಪಚಾರ ಮಾಡಲಿದ್ದಾರೆ ಎಂದರು.
ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ನಡೆಯುವ ಶಿಬಿರದಲ್ಲಿ ನುರಿತ ತಜ್ಞರು ಭಾಗವಹಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಮತ್ತು ಅಗತ್ಯ ಚಿಕಿತ್ಸೆ ಔಷದೋಪಚಾರ ಪಡೆದುಕೊಂಡು ಶಿಬಿರದ ಸದುಪಯೋಗಪಡಿಸಿಕೊಳ್ಳಿ ಎಂದು ಡಾ.ಸಂದೀಪ್ ಪುವ್ವಾಡ ಮನವಿ ಮಾಡಿದರು.