Mallur, Sidlaghatta : ಲಂಡನ್ ನ ಹೆಸರಾಂತ ನರ ರೋಗ ತಜ್ಞರು ಹಾಗೂ ಮಕ್ಕಳ ವಯಸ್ಕರ ಬೆನ್ನುಮೂಳೆ ತಜ್ಞರಾದ ಶ್ರೇಯ ಶ್ರೀನಿವಾಸ್ ಅವರು ತಾಲ್ಲೂಕಿನ ಮಳ್ಳೂರು ಗ್ರಾಮದ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಏ.7 ರ ಭಾನುವಾರ ನಡೆಯುವ ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 10.30 ರಿಂದ ಮದ್ಯಾಹ್ನ 3 ಗಂಟೆಯವರೆಗೂ ತಜ್ಞ ವೈದ್ಯರು ಶಿಬಿರದಲ್ಲಿ ಇರಲಿದ್ದು ನರ ಸಮಸ್ಯೆ, ಬೆನ್ನು ಮೂಳೆ ಸಮಸ್ಯೆ ಇರುವವರು ಶಿಬಿರದಲ್ಲಿ ಭಾಗವಹಿಸಬಹುದು, ಶಿಬಿರದಲ್ಲಿ ಭಾಗವಹಿಸುವವರು ಹಳೆಯ ವೈದ್ಯರ ರಿಪೋರ್ಟ್‌ಗಳನ್ನು ತರಬೇಕು.
ಉಚಿತವಾಗಿ ಸಲಹೆ ಸೂಚನೆ ಔಷದೋಪವಾರ ಹಾಗೂ ಚಿಕಿತ್ಸೆ ನೀಡಲಿದ್ದು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕೆಂದು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ಡಾ.ಸಂದೀಪ್ ಪುವ್ವಾಡ ಮನವಿ ಮಾಡಿದ್ದಾರೆ.