Home News KRS ಪಕ್ಷದ ತಾಲ್ಲೂಕು ಘಟಕ ಸ್ಥಾಪನೆ

KRS ಪಕ್ಷದ ತಾಲ್ಲೂಕು ಘಟಕ ಸ್ಥಾಪನೆ

0
2
Sidlaghatta KRS Party

Sidlaghatta : ಪ್ರಶ್ನೆ ಮಾಡಿದರೆ ಅಸಾಧ್ಯವೂ ಕೂಡ ಸಾಧ್ಯವಾಗುತ್ತದೆ ಇದು ಕೆ ಆರ್ ಎಸ್ ಪಕ್ಷದ ಸಿದ್ಧಾಂತ. ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣದ ಅಗತ್ಯತೆಯ ಅರಿವು ಮೂಡಿಸಲು ಹಾಗೂ ಭ್ರಷ್ಟಾಚಾರ-ಮುಕ್ತ ಕರ್ನಾಟಕ ಕಟ್ಟಲು ಹಲವಾರು ಜಾಗೃತಿ ಅಭಿಯಾನಗಳನ್ನು ಕೆ.ಆರ್.ಎಸ್. ಪಕ್ಷ ನಡೆಸುತ್ತಿದೆ ಎಂದು ಕೆ.ಆರ್.ಎಸ್. ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ವಿ.ವೇಣುಗೋಪಾಲ್ ತಿಳಿಸಿದರು.

ನಗರದಲ್ಲಿ ಗುರುವಾರ ಕೆ.ಆರ್.ಎಸ್. ಪಕ್ಷದ ತಾಲ್ಲೂಕು ಘಟದ ಸ್ಥಾಪನೆಯ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದ ಮತ್ತು ದೇಶದ ರಾಜಕೀಯದಲ್ಲಿ ಮೌಲ್ಯಗಳನ್ನು ಆಗ್ರಹಿಸಿ, ರಾಜಕಾರಣವನ್ನು ಸ್ವಚ್ಚ, ಪ್ರಾಮಾಣಿಕ ರೀತಿಯಲ್ಲಿ ನಡೆಸಬೇಕು ಎಂದು 2008 ರಿಂದ ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹೋರಾಟ ಮಾಡುತ್ತಿರುವ ರವಿ ಕೃಷ್ಣಾರೆಡ್ಡಿಯವರ ನೇತೃತ್ವದಲ್ಲಿ ರಾಜ್ಯದೆಲ್ಲೆಡೆ ಕೆ.ಆರ್.ಎಸ್. ಪಕ್ಷದ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಶಿವಾರೆಡ್ಡಿ ಮಾತನಾಡಿ, ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣ ಸ್ಥಾಪನೆಯಾಗಬೇಕು. ಪ್ರಜೆಗಳು ರಾಜಕೀಯ ಪಕ್ಷಗಳ ಗುಲಾಮರಾಗಬಾರದು, ಅವುಗಳ ಮಾಲೀಕರಾಗಬೇಕು. ಪ್ರಾದೇಶಿಕತೆ ಮತ್ತು ಒಕ್ಕೂಟ ವ್ಯವಸ್ಥೆಯ ಬಲವರ್ಧನೆ ಆಗಬೇಕು ಎಂಬ ಉದ್ದೇಶದಿಂದ ಪಕ್ಷವು ಕೆಲಸ ಮಾಡುತ್ತಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿಯೂ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉದ್ದೇಶದಿಂದ ತಾಲ್ಲೂಕು ಘಟಕ ಸ್ಥಾಪನೆ ಮಾಡಿರುವುದಾಗಿ ಹೇಳಿದರು.

ಕೆ.ಆರ್.ಎಸ್. ಶಿಡ್ಲಘಟ್ಟ ತಾಲ್ಲೂಕು ಘಟದ ಅಧ್ಯಕ್ಷ ಪಿಂಡಿಪಾಪನಹಳ್ಳಿ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಆರ್.ನಾರಾಯಣಸ್ವಾಮಿ, ಕಾರ್ಯದರ್ಶಿಗಳಾದ ಆನಂದಕುಮಾರ್, ವೆಂಕಟೇಶ್, ರಾಜಶೇಖರ್, ನರಸಿಂಹಯ್ಯ, ಸಂಘಟನಾ ಕಾರ್ಯದರ್ಶಿ ಶ್ರೀನಾಥ್ ಗೌಡ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!