Sidlaghatta : ಹೈನುಗಾರರಿಗೆ ರಾಸುಗಳಿಗೆ ಮೇವನ್ನು ಬೆಳೆದುಕೊಳ್ಳಲು ಅನುಕೂಲ ಆಗುವಂತೆ ತಲಾ 3 ಕೆಜಿ ಮೇವಿನ ಜೋಳದ ಬಿತ್ತನೆ ಬೀಜವನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಕೋಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ರವಿಕಿರಣ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೇನು ಮುಂಗಾರು ಮಳೆ ಆರಂಭವಾಗಿದೆ. ಆದರೂ ಮೇವಿನ ಕೊರತೆ ಇದೆ. ಹಾಗಾಗಿ ಹೈನುಗಾರರು ಮೇವಿನ ಜೋಳವನ್ನು ಬೆಳೆದುಕೊಂಡು ಸ್ವಲ್ಪವಾದರೂ ಮೇವಿನ ಕೊರತೆಯನ್ನು ನೀಗಿಸಿಕೊಳ್ಳಲು ಅನುಕೂಲ ಆಗುವಂತೆ ಮೇವಿನ ಬಿತ್ತನೆ ಜೋಳವನ್ನು ವಿತರಿಸಲಾಗುತ್ತಿದೆ ಎಂದರು.
ಹೈನುಗಾರ ರೈತರು ತಮ್ಮ ತಮ್ಮ ಡೇರಿಗಳಲ್ಲಿ ಪಹಣಿಯನ್ನು ಕೊಟ್ಟು ಹೆಸರನ್ನು ನೋಂದಾಯಿಸಿ. ನಾವು ಡೇರಿಗಳ ಮೂಲಕ ತಲಾ 3 ಕೆಜಿ ಜೋಳದ ಬಿತ್ತನೆ ಬೀಜವನ್ನು ವಿತರಿಸುತ್ತೇವೆ. ಪ್ರತಿ ರೈತರೂ ಕೋಚಿಮುಲ್ ಶಿಬಿರ ಕಚೇರಿಗೆ ಅನಗತ್ಯವಾಗಿ ಬರುವುದು ಬೇಡ ಎಂದು ಮನವಿ ಮಾಡಿದ್ದಾರೆ.