Kempanahalli, Sidlaghatta : ಈಜಲು ಕೃಷಿಹೊಂಡಕ್ಕಿಳಿದ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಕೆಂಪನಹಳ್ಳಿ ಗ್ರಾಮದ ಸುಬ್ರಮಣಿ ಹಾಗು ಗೌರಮ್ಮ ದಂಪತಿಯ ಮಗ ನಿತಿನ್‌ಕುಮಾರ್ (15) ಹಾಗು ಅಂಗರೇಕನಹಳ್ಳಿ ಗ್ರಾಮದ ಹನುಮಂತಪ್ಪ ಹಾಗು ಪದ್ಮ ದಂಪತಿಗಳ ಪುತ್ರ ಮಂಜುನಾಥ್ (16) ಎನ್ನಲಾಗಿದೆ.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪನಹಳ್ಳಿ ಗ್ರಾಮದ ಸುಬ್ರಮಣಿ ಹಾಗು ಗೌರಮ್ಮ ಮನೆಗೆ ಬಂದಿದ್ದ ಅಂಗರೇಕನಹಳ್ಳಿಯ ಮಂಜುನಾಥ್ ಹಾಗು ನಿತಿನ್‌ಕುಮಾರ್ ಮಂಗಳವಾರ ಮನೆಯ ಹಿಂಭಾಗದ ತೋಟದಲ್ಲಿರುವ ಕೃಷಿಹೊಂಡಕ್ಕೆ ಈಜು ಹೊಡೆಯಲೆಂದು ಇಳಿದಿದ್ದು ಮಂಜುನಾಥ್ ಹಾಗು ನಿತಿನ್‌ಕುಮಾರ್ ಕೃಷಿಹೊಂಡದ ನೀರಿನಲ್ಲಿ ಮುಳುಗಿದ್ದು ಕಂಡ ಮತ್ತೋರ್ವ ಬಾಲಕ ಘಟನೆಯ ಬಗ್ಗೆ ಮನೆಯವರಿಗೆ ತಿಳಿಸಿದ್ದಾನೆ. ವಿಷಯ ತಿಳಿದ ಪೋಷಕರು ಸ್ಥಳಕ್ಕೆ ಬರುವಷ್ಟರಲ್ಲಿ ಬಾಲಕರಿಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ಗ್ರಾಮಾಂತರ ಠಾಣೆ ಪಿಎಸ್ಸೈ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.