21.1 C
Sidlaghatta
Thursday, December 12, 2024

ಕರ್ನಾಟಕ ಜಾನಪದ ಪರಿಷತ್ತು ನೂತನ ತಾಲ್ಲೂಕು ಅಧ್ಯಕ್ಷರ ಪದಗ್ರಹಣ

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯಿರುವ ಶ್ರೀ ಬಯಲಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ ನೂತನ ತಾಲೂಕು ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ವೈ.ಎಲ್.ಹನುಮಂತರಾವ್ ಮಾತನಾಡಿದರು.

ಜಾನಪದ ಕಲೆಗಳಿಗೆ ಮತ್ತು ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದನ್ನು ಉಳಿಸಿ ಬೆಳಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಜನಪದ ಕಲಾವಿದರ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನಡೆಯಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧ್ಯಕ್ಷೆ ಉಷಾ ಶ್ರೀನಿವಾಸ್‌ಬಾಬು ಮಾತನಾಡಿ ಮನುಷ್ಯ ನಷ್ಟೆ ಪ್ರಾಚೀನವಾದದು ಜನಪದ ಕಲೆಗಳು ಮತ್ತು ಸಾಹಿತ್ಯ, ಪರಿಸರ ವೀಕ್ಷಣೆಯಿಂದ, ಅನುಕರಣೆ ಯಿಂದ ಅಂತದನ್ನು ಒಂದು ಕಡೆ ದಾಖಲಿಸುವ ಕೆಲಸ ಆಗಬೇಕು. ಮನುಷ್ಯ ಸಹಜ ಗುಣಗಳಿಂದ ಇಂತಹ ಕಲೆಗಳು ಅಸ್ತಿತ್ವಕ್ಕೆ ಬಂದಿದೆ. ಜಾನಪದ ಕಲಾವಿದರು ಗ್ರಾಮೀಣ ಭಾಗದ ತಾಯಿ ಬೇರುಗಳಿದ್ದಂತೆ. ಜಾನಪದ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿದೆ ಎಂದರು.

ಕನಾಟಕ ಜಾನಪದ ಪರಿಷತ್ ನೂತನ ತಾಲ್ಲೂಕು ಅಧ್ಯಕ್ಷ ಎ.ಎಂತ್ಯಾಗಾಜ್ ಮಾತನಾಡಿ, ಶಿಡ್ಲಘಟ್ಟ ತಾಲೂಕಿನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು, ಪ್ರತಿಯೊಬ್ಬರಲ್ಲಿ ಇರುವ ಕಲೆಯನ್ನು ಹೊರತರುವ ಪ್ರಯತ್ನ ಮಾಡಬೇಕು. ಶಿಡ್ಲಘಟ್ಟ ತಾಲ್ಲೂಕು ಕಜಾಪ ಈ ನಿಟ್ಟಿನಲ್ಲಿ ಎಲ್ಲಾ ಕಲಾವಿದರಿಗೂ ಅವರ ಕಲೆಯನ್ನು ಪ್ರದರ್ಶನ ಮಾಡಲಿಕ್ಕೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಿದೆ. ಮುಂಬರುವ ದಿನಗಳಲ್ಲಿ ಕಜಾಪ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಶಿಡ್ಲಘಟ್ಟ ತಾಲ್ಲೂಕಿಗೆ ನೀಡಬೇಕೆಂದು ಜಿಲ್ಲಾಧ್ಯಕ್ಷರ ಬಳಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಾನಪದ ಗಾಯಕರಾದ ದೇವರಮಳ್ಳೂರು ಮಹೇಶ್ ಮತ್ತು ಚಿ.ಮು.ಹರೀಶ್ ಜಾನಪದ ಗೀತೆಗಳನ್ನು ಹಾಡಿದರು. ಜಿಲ್ಲಾ ಕಜಾಪ ಮತ್ತು ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ನೂತನ ಅಧ್ಯಕ್ಷ ಎ.ಎಂ.ತ್ಯಾಗರಾಜ್ ರವರನ್ನು ಸನ್ಮಾನಿಸಲಾಯಿತು.

ಶಿಡ್ಲಘಟ್ಟ ತಾಲ್ಲೂಕು ಕಜಾಪ ವತಿಯಿಂದ ಹಿರಿಯ ಕಲಾವಿದ ನಾಡೋಜ ಮುನಿವೆಂಕಟಪ್ಪ, ಜಾನಪದ ಗಾಯಕ ಮಹೇಶ್‌ಕುಮಾರ್ ಮತ್ತು ಕಲಾವಿದ ರಾಘವಯ್ಯ ರವರನ್ನು ಸನ್ಮಾನಿಸಲಾಯಿತು.

ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಸತೀಶ್, ಚಿಂತಾಮಣಿ ಕಜಾಪ ಅಧ್ಯಕ್ಷೆ ಲೀಲಾ ಲಕ್ಷ್ಮೀನಾರಾಯಣ, ಜಿಲ್ಲಾ ಖಜಾಂಚಿ ಮಂಜುನಾಥಗೌಡ, ಮಂಜುಳ ಕಲಾವಿದರಾದ ಲಕ್ಷ್ಮೀನಾರಾಯಣ, ಭಕ್ತರಹಳ್ಳಿನಾಗೇಶ್, ನಾಮದೇವ್, ಮುನಿಆಂಜಿನಪ್ಪ, ಎಂ.ಎಂ.ಸ್ವಾಮಿ, ರಾಮಾಂಜಿನಪ್ಪ, ವೀರಪ್ಪ ರೋಹಿಣಿಕುಮಾರ್ ಮತ್ತು ತಾಲ್ಲೂಕಿನ ಕಲಾವಿದರು ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!