ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಸಾಮಾಜಿಕವಾಗಿ ಕೆಳವರ್ಗದಿಂದ ಬಂದು ದಾಸದೀಕ್ಷೆ ಪಡೆದು ಉತ್ತಮ ಕೃತಿಗಳನ್ನು ರಚಿಸಿ ದಾಸಸಾಹಿತ್ಯಕ್ಕೆ ಹೊಸ ಆಯಾಮವನ್ನು ಕನಕದಾಸರು ಸೃಷ್ಟಿಸಿದರು. ಕನಕದಾಸರ ಕೀರ್ತನೆಗಳು, ಮುಂಡಿಗೆ, ಉಗಾಬೋಗಗಳು ದೈವಭಕ್ತಿ, ಜೀವನದರ್ಶನ, ಸಮಾಜವಿಮರ್ಶೆ, ಲೋಕಾನುಭವವನ್ನು ತಿಳಿಸುತ್ತವೆ. ಕನಕದಾಸರು ರಚಿಸಿದ ಕೀರ್ತನೆಗಳು ಮತ್ತು ಉಗಾಭೋಗಗಳು ಕರ್ನಾಟಕ ಸಂಗೀತದ ಅನನ್ಯ ರಚನೆಗಳಾಗಿವೆ. ಅಂದಿನ ಸಮಾಜದಲ್ಲಿನ ಮೌಡ್ಯಕಂದಾಚಾರ, ಪೊಳ್ಳುನಂಬಿಕೆ, ವರ್ಣವ್ಯವಸ್ಥೆಯ ವಿರುದ್ಧ ಖಂಡನೀಯವಾಗಿ ಕೀರ್ತನಾ ಸಾಹಿತ್ಯದ ಮೂಲಕ ಜನರಿಗೆ ಅರಿವು ಮೂಡಿಸಿದವರಲ್ಲಿ ಕನಕದಾಸರು ಪ್ರಮುಖರು ಎಂದು ಅವರು ತಿಳಿಸಿದರು.
ಗ್ರಾಮಪಂಚಾಯಿತಿ ಮಾಜಿ ಸದಸ್ಯೆ ಪದ್ಮಮ್ಮ ಅಶ್ವತ್ಥಪ್ಪ ಅವರು ಗ್ರಂಥಾಲಯ ಮತ್ತು ಪ್ರಯೋಗಾಲಯಕ್ಕೆ ಟೇಬಲ್‌ಗಳನ್ನು ಕೊಡುಗೆಯನ್ನು ನೀಡಿದರು. ಕುರುಬರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾಸಾಮಗ್ರಿಗಳನ್ನು ವಿತರಿಸಲಾಯಿತು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾಸಾಮಗ್ರಿಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಂದ ಕೀರ್ತನೆಗಳ ಗಾಯನ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಎಸ್.ಆರ್.ನಾಗೇಶ್, ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್‌ಕುಮಾರ್, ಶಿವಶಂಕರಪ್ಪ, ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಪದ್ಮಮ್ಮ, ಗುತ್ತಿಗೆದಾರ ದೇವರಾಜು, ಎಸ್‌ಡಿಎಂಸಿ ಸದಸ್ಯ ನಾರಾಯಣಸ್ವಾಮಿ, ರತ್ನಮ್ಮ, ಮಾಜಿ ಸದಸ್ಯ ಬಚ್ಚೇಗೌಡ, ದೊಡ್ಡಮುನಿವೆಂಕಟಶೆಟ್ಟಿ, ಚಿಕ್ಕಮುನಿವೆಂಕಟಶೆಟ್ಟಿ, ಎಂಪಿಸಿಎಸ್ ಅಧ್ಯಕ್ಷ ಮಂಜುನಾಥಗೌಡ, ಕುರುಬರ ಸಂಘದ ಪೂಜಾರಪ್ಪ, ಆಂಜಿನಪ್ಪ, ಗೋಪಾಲ್, ಭರತ್, ಆನಂದಪ್ಪ, ನಾರಾಯಣಸ್ವಾಮಿ, ಶಿಕ್ಷಕರು ಹಾಜರಿದ್ದರು.