“ಸುಗ್ಗಿಯ ಸೊಗಡಿನ ಸಂಕ್ರಾಂತಿ” ಹಬ್ಬವನ್ನು ಶುಕ್ರವಾರ ತಾಲ್ಲೂಕಿನ ಕಾಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.
ಕಡಲೇಕಾಯಿಯನ್ನು ಸುಲಿದು ಅಕ್ಷರ ಮತ್ತು ಪದಗಳನ್ನು ಬೀಜಗಳಿಂದಲೇ ರಚಿಸೌವ ಸ್ಪರ್ಧೆಯನ್ನು ಮಕ್ಕಳಿಗೆ ಏರ್ಪಡಿಸಲಾಗಿತ್ತು. ಹೆಚ್ಚು ಬೀಜಗಳನ್ನು ಬಿಡಿಸಿ, ಹೆಚ್ಚು ಅಕ್ಷರಗಳುಳ್ಳ ಪದಗಳನ್ನು ರಚಿಸಿದವರಿಗೆ ಅಂಕಗಳನ್ನು ನೀಡಲಾಯಿತು. ಹೆಣ್ಣು ಮಕ್ಕಳಿಗೆ ರಂಗೋಲಿ ಸ್ಪರ್ಧೆಯನ್ನು ನಡೆಸಲಾಯಿತು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ನೀಡಿ, ಮಕ್ಕಳಿಗೆ ಸಂಕ್ರಾಂತಿಯ ವಿಶೇಷಗಳು, ಆಚರಣೆಗಳು, ಜನಪದರ ಸಂಪ್ರದಾಯಗಳ ಬಗ್ಗೆ ವಿವರಿಸಿದರು. ಮಕ್ಕಳಿಗೆಲ್ಲಾ ಎಳ್ಳು, ಬೆಲ್ಲ, ಕಬ್ಬನ್ನು ನೀಡಿ ಶುಭ ಹಾರೈಸಲಾಯಿತು.
ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ, ಶಿಕ್ಷಕ ವಿ.ಚಂದ್ರಶೇಖರ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಉಮಾ, ರುಕ್ಮಿಣಿಯಮ್ಮ, ಗಾಯಿತ್ರಮ್ಮ, ಗೌರಮ್ಮ ಹಾಜರಿದ್ದರು.