Sidlaghatta : LGBT ಸಮುದಾಯಗಳ ಹಕ್ಕುಗಳ ತುಲನಾತ್ಮಕ ಅಧ್ಯಯನ ಸಾಮಾಜಿಕ ಕಾನೂನು ದೃಷ್ಟಿಕೋನ ಕುರಿತು ಮಂಡಿಸಿದ ಪ್ರಬಂಧಕ್ಕೆ ಶಿಡ್ಲಘಟ್ಟದ ನಿವಾಸಿ ನ್ಯಾಯಾಧೀಶೆ ಎನ್.ಚಾಂದಿನಿ ಅವರಿಗೆ PhD ಪದವಿ ಲಭಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯದ 57 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಘಟಿಕೋತ್ಸವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಪಿಎಚ್‌ಡಿ ಪದವಿ ನೀಡಿ ಗೌರವಿಸಲಾಗಿದೆ. ಡಾ.ವಿ.ಸುರೇಶ್ ನಾಡಗೌಡರ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.
ಶಿಡ್ಲಘಟ್ಟದಲ್ಲಿ ನೋಟರಿಯಾಗಿದ್ದ ಹಿರಿಯ ವಕೀಲ ದಿ.ನೌಷದ್ ಅಲಿ ಮತ್ತು ನಿವೃತ್ತ ಎಸಿಡಿಪಿಒ ಎಸ್.ಕೆ.ತಾಜುನ್ನೀಸಾ ಅವರ ಮಗಳಾದ ಡಾ.ಚಾಂದಿನಿ 2019 ರಲ್ಲಿ Master of Law ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದರು. ಇದೀಗ ಕಾನೂನು ವಿಭಾಗದಲ್ಲಿ ಪಿಎಚ್‌ಡಿ ಮಾಡಿ ರೇಷ್ಮೆ ನಗರ ಶಿಡ್ಲಘಟ್ಟಕ್ಕೆ ಮತ್ತಷ್ಟು ಗೌರವ ತಂದುಕೊಟ್ಟಿದ್ದಾರೆ. ಇವರ ಸಹೋದರಿ ನೌತಾಜ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.