Sidlaghatta : ಉತ್ತಮ ಸಮಾಜದ ನಿರ್ಮಾಣಕ್ಕೆ ಪತ್ರಿಕೆಗಳ ಪಾತ್ರ ಮಹತ್ವದಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಆ ನಂತರದ ದೇಶದ ಅಭಿವೃದ್ದಿಯಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾದುದು. ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದ ಜತೆಗೂಡಿ ನಾಲ್ಕನೇ ಸ್ತಂಭದಂತೆ ದೇಶದ ಪ್ರಗತಿಗೆ ಪೂರಕವಾಗಿ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಶ್ರೀಕೆಂಪಣ್ಣ ಶ್ರೀವೀರಣ್ಣ ಭವನದಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರಿಗೆ ತಾಳ್ಮೆ ಮತ್ತು ವ್ಯವದಾನ ಬಹಳ ಮುಖ್ಯವಾಗುತ್ತದೆ. ಪ್ರತಿ ಯೊಂದು ವಿಚಾರವನ್ನು ಸಮಾಜ ಮುಖಿಯಾಗಿ ಚಿಂತಿಸಿ ಅದರ ಬದಲಾವಣೆಗೆ ಪ್ರಯತ್ನಿಸ ಬೇಕು. ಪತ್ರಿಕೆಗಳು ಬಡವರ ಶೋಷಿತ ವರ್ಗದ ಪರವಾದ ಧ್ವನಿಯಾಗಬೇಕು ಎಂದು ಹೇಳಿದರು.
ನಾವೆಲ್ಲರೂ ಒಪ್ಪಿಕೊಂಡಿರುವ ಸಂವಿಧಾನದ ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದೊಂದಿಗೆ ಈ ದೇಶದ ಅಭಿವೃದ್ದಿಗೆ ಪತ್ರಿಕಾ ರಂಗವೂ ಸಹ ತನ್ನದೇ ಆದ ದಾರಿಯಲ್ಲಿ ಕಾರ್ಯನಿರ್ವಹಿಸುತ್ತಾ ಅಪಾರ ಕೊಡುಗೆ ನೀಡಿದೆ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಯಿತು. ಪತ್ರಕರ್ತ ದಿವಂಗತ ರಮೇಶ್ ಕುಟುಂಬಕ್ಕೆ ದಾನಿಗಳಿಂದ ಸಂಗ್ರಹಿಸಿದ ನೆರವನ್ನು ಹಸ್ತಾಂತರಿಸಲಾಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಹಾಗೂ ಮಾಧ್ಯಮ ಕ್ಷೇತ್ರವು ಜಾತಿ ಧರ್ಮ ಸ್ವ ಹಿತಾಸಕ್ತಿ ಬಿಟ್ಟು ಕಾರ್ಯನಿರ್ವಹಿಸುವಂತಾಗಬೇಕು. ಆಗಲೆ ಸಂವಿಧಾನ ಎಲ್ಲ ಆಶಯಗಳು ಈಡೇರಲು ಸಾಧ್ಯ, ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ತಮ್ಮ ಕಾರ್ಯವನ್ನು ಮಾಡೋಣ ಎಂದು ಆಶಿಸಿದರು.
ಈ ಕ್ಷೇತ್ರವು ಶೈಕ್ಷಣಿಕವಾಗಿ, ಆರೋಗ್ಯ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿದೆ. ನಾನು ಚುನಾವಣೆ ಸಮಯದಲ್ಲಿ ಈ ಎರಡೂ ಕ್ಷೇತ್ರಗಳಿಗೆ ನಾನು ಒತ್ತು ನೀಡುವ ಭರವಸೆ ನೀಡಿದ್ದು ಈ ಕ್ಷೇತ್ರದ ಮತದಾರರು ನನ್ನ ಕೈ ಹಿಡಿದಿದ್ದಾರೆ. ಹಾಗಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ನಾನು ಒತ್ತು ನೀಡಲಿದ್ದು ಅಧಿಕಾರಿ ವರ್ಗ, ಸಂಘ ಸಂಸ್ಥೆಗಳು, ಸಮುದಾಯ ಹಾಗೂ ಮಾಧ್ಯಮದವರ ಸಹಕಾರ ಹೆಚ್ಚಿನ ರೀತಿಯಲ್ಲಿ ಬೇಕಿದೆ ಎಂದು ಮನವಿ ಮಾಡಿದರು.
ತಮಟೆ ಕಲಾವಿದ, ಪದ್ಮಶ್ರೀ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ, ಕೇಂದ್ರ ಲೋಕಸೇವಾ ಆಯೋಗದ ಭಾರತೀಯ ಅರಣ್ಯ ಸೇವಾ ಪರೀಕ್ಷೆಯಲ್ಲಿ 20ನೇ ರ್‍ಯಾಂಕ್ ಪಡೆದ ತಲದುಮ್ಮನಹಳ್ಳಿಯ ಆಕರ್ಷ್ ಅವರ ತಂದೆ ಮುನೇಗೌಡ, ತಾಯಿ ಸೌಭಾಗ್ಯಮ್ಮ ಅವರನ್ನು ಸನ್ಮಾನಿಸಲಾಯಿತು.
ಉತ್ತಮ ಸಮಾಜದ ನಿರ್ಮಾಣಕ್ಕೆ ಪತ್ರಿಕೆಗಳ ಪಾತ್ರ ಮಹತ್ವದಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಆ ನಂತರದ ದೇಶದ ಅಭಿವೃದ್ದಿಯಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾದುದು. ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದ ಜತೆಗೂಡಿ ನಾಲ್ಕನೇ ಸ್ತಂಭದಂತೆ ದೇಶದ ಪ್ರಗತಿಗೆ ಪೂರಕವಾಗಿ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಶ್ರೀಕೆಂಪಣ್ಣ ಶ್ರೀವೀರಣ್ಣ ಭವನದಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರಿಗೆ ತಾಳ್ಮೆ ಮತ್ತು ವ್ಯವದಾನ ಬಹಳ ಮುಖ್ಯವಾಗುತ್ತದೆ. ಪ್ರತಿ ಯೊಂದು ವಿಚಾರವನ್ನು ಸಮಾಜ ಮುಖಿಯಾಗಿ ಚಿಂತಿಸಿ ಅದರ ಬದಲಾವಣೆಗೆ ಪ್ರಯತ್ನಿಸ ಬೇಕು. ಪತ್ರಿಕೆಗಳು ಬಡವರ ಶೋಷಿತ ವರ್ಗದ ಪರವಾದ ಧ್ವನಿಯಾಗಬೇಕು ಎಂದು ಹೇಳಿದರು.
ನಾವೆಲ್ಲರೂ ಒಪ್ಪಿಕೊಂಡಿರುವ ಸಂವಿಧಾನದ ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದೊಂದಿಗೆ ಈ ದೇಶದ ಅಭಿವೃದ್ದಿಗೆ ಪತ್ರಿಕಾ ರಂಗವೂ ಸಹ ತನ್ನದೇ ಆದ ದಾರಿಯಲ್ಲಿ ಕಾರ್ಯನಿರ್ವಹಿಸುತ್ತಾ ಅಪಾರ ಕೊಡುಗೆ ನೀಡಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಹಾಗೂ ಮಾಧ್ಯಮ ಕ್ಷೇತ್ರವು ಜಾತಿ ಧರ್ಮ ಸ್ವ ಹಿತಾಸಕ್ತಿ ಬಿಟ್ಟು ಕಾರ್ಯನಿರ್ವಹಿಸುವಂತಾಗಬೇಕು. ಆಗಲೆ ಸಂವಿಧಾನ ಎಲ್ಲ ಆಶಯಗಳು ಈಡೇರಲು ಸಾಧ್ಯ, ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ತಮ್ಮ ಕಾರ್ಯವನ್ನು ಮಾಡೋಣ ಎಂದು ಆಶಿಸಿದರು.
ಈ ಕ್ಷೇತ್ರವು ಶೈಕ್ಷಣಿಕವಾಗಿ, ಆರೋಗ್ಯ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿದೆ. ನಾನು ಚುನಾವಣೆ ಸಮಯದಲ್ಲಿ ಈ ಎರಡೂ ಕ್ಷೇತ್ರಗಳಿಗೆ ನಾನು ಒತ್ತು ನೀಡುವ ಭರವಸೆ ನೀಡಿದ್ದು ಈ ಕ್ಷೇತ್ರದ ಮತದಾರರು ನನ್ನ ಕೈ ಹಿಡಿದಿದ್ದಾರೆ. ಹಾಗಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ನಾನು ಒತ್ತು ನೀಡಲಿದ್ದು ಅಧಿಕಾರಿ ವರ್ಗ, ಸಂಘ ಸಂಸ್ಥೆಗಳು, ಸಮುದಾಯ ಹಾಗೂ ಮಾಧ್ಯಮದವರ ಸಹಕಾರ ಹೆಚ್ಚಿನ ರೀತಿಯಲ್ಲಿ ಬೇಕಿದೆ ಎಂದು ಮನವಿ ಮಾಡಿದರು.
ತಮಟೆ ಕಲಾವಿದ, ಪದ್ಮಶ್ರೀ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ, ಕೇಂದ್ರ ಲೋಕಸೇವಾ ಆಯೋಗದ ಭಾರತೀಯ ಅರಣ್ಯ ಸೇವಾ ಪರೀಕ್ಷೆಯಲ್ಲಿ 20ನೇ ರ್‍ಯಾಂಕ್ ಪಡೆದ ತಲದುಮ್ಮನಹಳ್ಳಿಯ ಆಕರ್ಷ್ ಅವರ ತಂದೆ ಮುನೇಗೌಡ, ತಾಯಿ ಸೌಭಾಗ್ಯಮ್ಮ ಅವರನ್ನು ಸನ್ಮಾನಿಸಲಾಯಿತು.
ಶಿಡ್ಲಘಟ್ಟ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವೀರಾಪುರ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ.ರಾಜಣ್ಣ, ಕೆ.ಎಂ.ಎಫ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್‌ಗೌಡ, ಎಸ್.ಎನ್. ಕ್ರಿಯಾ ಟ್ರಸ್ಟ್‌ನ ಪುಟ್ಟು ಆಂಜಿನಪ್ಪ, ಕೆಪಿಸಿಸಿ ಜಿಲ್ಲಾ ಕೋಆರ್ಡಿನೇಟರ್ ರಾಜೀವ್‌ಗೌಡ, ಬಿಜೆಪಿ ಯುವ ಮುಖಂಡ ಆನಂದ್‌ಗೌಡ, ಕಂಬದಹಳ್ಳಿ ಸುರೇಂದ್ರಗೌಡ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಸರ್ಕಾರಿ ನೌಕರರ ತಾಲ್ಲೂಕು ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಎಚ್.ಜಿ.ಗೋಪಾಲಗೌಡ, ಬಂಕ್ ಮುನಿಯಪ್ಪ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಂ ಹಾಜರಿದ್ದರು.
ತಾಲ್ಲೂಕು ಪಂಚಾಯಿತಿಯ ಎನ್.ಆರ್.ಎಲ್.ಎಂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವ ಸ್ವಹಾಯ ಸಂಘಗಳ ಉತ್ಪನ್ನಗಳ ಮಾರಾಟ ಮೇಳ, ಛಾಯಾ ಚಿತ್ರಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ್ ಅವರ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾ ಚಿತ್ರಗಳು ಹಾಗೂ ಶಿಡ್ಲಘಟ್ಟ ದರ್ಶನ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಕ್ಷಕ ಕಲ್ಯಾಣ್ ಕುಮಾರ್ ಅವರ ವಿಶ್ವ ಕನ್ನಡ ಪತ್ರಿಕೆಗಳ ಪ್ರದರ್ಶನ ನಡೆಯಿತು.