Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ಗೇಟ್ ಬಳಿ ಆಗಮಿಸಿದ ಈಶ ರಥ ಯಾತ್ರೆಯನ್ನು ನಗರಕ್ಕೆ ಭವ್ಯವಾಗಿ ಸ್ವಾಗತ ಕೋರಲಾಯಿತು.
ಈಶಾ ಫೌಂಡೇಶನ್ ರವರ ಶಿವ ಪರಮಾತ್ಮನ ಪುಣ್ಯ ರಥ ನಗರ ಪ್ರವೇಶಿಸುವಾಗ ನಗರಸಭೆಯ ಅಧ್ಯಕ್ಷೆ ಸುಮಿತ್ರ ರಮೇಶ್, ನಗರಸಭೆಯ ಸದಸ್ಯರು ಹಾಗೂ ಪೌರಾಯುಕ್ತ ಶ್ರೀಕಾಂತ್ ರವರು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ನಗರದ ಗಣ್ಯರು ರಥವನ್ನು ಎಳೆಯುವ ಮೂಲಕ ನಗರ ಪ್ರವೇಶ ಮಾಡಿದರು. ವೀರಗಾಸೆ ಮುಂತಾದ ಕಲಾತಂಡಗಳು ಹಾಗೂ ವಾದ್ಯವೃಂದದೊಂದಿಗೆ ಆಗಮಿಸಿದ ರಥವನ್ನು ಎಳೆಯುತ್ತಾ ಕೆಲವು ಭಕ್ತರು, ವಾದ್ಯದ ಲಯಕ್ಕೆ ಕುಣಿಯುತ್ತಾ ಸಾಗಿದ್ದು ವಿಶೇಷವಾಗಿತ್ತು.
ನಗರದ ಕೋಟೆ ವೃತ್ತದಿಂದ ಅಶೋಕರಸ್ತೆಯಲ್ಲಿ ಸಾಗಿದ ರಥವು ಶಿವಕುಮಾರಸ್ವಾಮಿ ಹೂವಿನ ವೃತ್ತದ ಮುಖಾಂತರ ಹಾದು ಹೋಯಿತು. ದಾರಿಯಲ್ಲಿ ಅನೇಕರು ರಥದಲ್ಲಿನ ಆದಿಯೋಗಿಗೆ ಪೂಜೆಯನ್ನು ಸಲ್ಲಿಸಿದರು. ಹೂಗಳನ್ನು ಅರ್ಪಿಸಿ ನಮಸ್ಕರಿಸುತ್ತಿದ್ದರು.
ನಗರಸಭಾ ಸದಸ್ಯರಾದ ಎಲ್.ಅನಿಲ್ ಕುಮಾರ್, ಮನೋಹರ್ ಹಾಜರಿದ್ದರು.