Sidlaghatta : ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗೇಟ್ ಬಳಿ ಇರುವ ಎಸ್‌ಎಲ್‌ವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಶಿಡ್ಲಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಿ.ಎಸ್.ರವೀಂದ್ರನಾಥ್ ಅವರಿಗೆ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಳಗ್ಗೆ ೧೧ ಗಂಟೆಯಿಂದಲೇ ರಸಮಂಜರಿ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂದಿತ್ತು ಹಳೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಕಂಡು ಪಾದಸ್ಪರ್ಶಿಸಿ ಆಶೀರ್ವಾದ ಪಡೆದರು ಇನ್ನೂ ಹಲವು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುವನ್ನು ನೋಡಿ ಭಾವಕರಾದರು.
ನಿರೂಪಕ ಹಾಗೂ ಗಾಯಕ ಶಿವಮೊಗ್ಗ ವಿಶ್ವನಾಥ್, ಹಳೆಯ ವಿದ್ಯಾರ್ಥಿ ಚಂದ್ರಪ್ಪ ಮತ್ತು ತಂಡದವರು ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಿದ್ದರು. ಕಾರ್ಯಕ್ರಮದ ಕೇಂದ್ರ ಬಿಂದು ಪಿ.ಎಸ್.ರವೀಂದ್ರನಾಥ್ ಸನ್ಮಾನಿಸಿ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಶಿಸ್ತು ಕಲಿಸಿ ಅವರ ಜೀವನವನ್ನು ಉಜ್ವಲ ಗೊಳಿಸಿದ ಗುರು ಪಿ.ಎಸ್.ರವೀಂದ್ರನಾಥ್ ಅವರಿಗೆ ಹಳೆ ಶಿಷ್ಯರೆಲ್ಲ ಸೇರಿ ಗುರು ವಂದನಾ ಕಾರ್ಯಕ್ರಮದಲ್ಲಿ ಗುರು ನಮನದ ಮೂಲಕ ಗುರುಗಳಿಗೆ ಪ್ರೀತಿ ಆದರದಿಂದ ಸ್ವಾಗತಿಸಿ ಅಭಿನಂದಿಸಿದರು ಒಂದು ರೀತಿಯಲ್ಲಿ ಕಲ್ಯಾಣ ಮಂಟಪದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಕಾರ್ಯಕ್ರಮದಲ್ಲಿ ಚಿತ್ರನಟ ಹಾಗೂ ಮಾಜಿ ಸಂಸದ ಶಶಿಕುಮಾರ್, ಮಾಜಿ ಶಾಸಕ ಎಂ.ರಾಜಣ್ಣ, ಕಾರ್ಯಕ್ರಮದ ಸಂಘಟಕರಾದ ಚಂದ್ರಪ್ಪ, ಉದ್ಯಮಿ ಗೋವಿಂದರೆಡ್ಡಿ, ಶಿಡ್ಲಘಟ್ಟ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.