19.1 C
Sidlaghatta
Sunday, December 22, 2024

ಸರ್ಕಾರಿ ನೌಕರರ ಸಂಘದ ಚುನಾವಣೆ, ಶಿಕ್ಷಕರ ಮತಕ್ಷೇತ್ರದಿಂದ 3 ಶಿಕ್ಷಕರ ಆಯ್ಕೆ

- Advertisement -
- Advertisement -

Sidlaghatta : ರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪ್ರಾಥಮಿಕ ಶಾಲಾ ಶಿಕ್ಷಕರ ಮತಕ್ಷೇತ್ರದ ಮೂರು ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಡಿ ಸಿಂಡಿಕೇಟ್ ಮಾಡಿಕೊಂಡಿದ್ದ ಎಂ.ಕೆಂಪೇಗೌಡ, ಮಂಜುನಾಥ್ ಎಂ.ಮೇಲೂರು, ನರಸಿಂಹರೆಡ್ಡಿ ಚುನಾಯಿತರಾದರು.

ಮೂರು ಸ್ಥಾನಗಳಿಗೆ 8 ಮಂದಿ ಕಣದಲ್ಲಿದ್ದರು. ಸಂಜೆ 4 ಗಂಟೆವರೆಗೆ ಮತದಾನ ನಡೆದು ನಂತರ ಮತ ಎಣಿಕೆ ನಡೆಯಿತು. ಒಟ್ಟು 11 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು. ಆಯ್ಕೆಯಾದ ಮಂಜುನಾಥ್ ಎಂ.ಮೇಲೂರು- 369, ಎಂ.ಕೆಂಪೇಗೌಡ- 318, ನರಸಿಂಹರೆಡ್ಡಿ- 306 ಮತಗಳನ್ನು ಪಡೆದು ಚುನಾಯಿತರಾದರೆ, ಉಳಿದ ಅಭ್ಯರ್ಥಿಗಳಾದ ಎಸ್.ಎಂ.ಅಶ್ವತ್ಥಕುಮಾರ್-154, ವಿ.ಗೋವಿಂದ-9 , ಎಸ್.ಮುಜಾಫೀರ್-170 , ಎಚ್.ಸಿ.ಮೋಹನ್- 12, ಎಸ್.ಸುರೇಶ್‌ಬಾಬು- 264 ಮತಗಳನ್ನು ಪಡೆದು ಪರಾಭವಗೊಂಡರು.

ಚುನಾವಣಾಧಿಕಾರಿಯಾಗಿ ನಿವೃತ್ತ ಮುಖ್ಯಶಿಕ್ಷಕ ಬೈರಾರೆಡ್ಡಿ, ಎಲ್.ವಿ.ವೆಂಕಟರೆಡ್ಡಿ ತಂಡವು ಕಾರ್ಯನಿರ್ವಹಿಸಿತು. ಚುನಾಯಿತರಾದ ಮಂಜುನಾಥ್ ಎಂ.ಮೇಲೂರು ಮಾತನಾಡಿ, ಈ ಅವಧಿಯಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಯಾವುದೇ ತಾರತಮ್ಯವಿಲ್ಲದೇ ಆದ್ಯತೆ ಮೇರೆಗೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಎಂ.ಕೆಂಪೇಗೌಡ ಅವರು ಮಾತನಾಡಿ, ಶಿಕ್ಷಕರಲ್ಲಿ ಯಾವುದೇ ಬಣಗಳಿಗೆ ಅವಕಾಶ ನೀಡದೇ ಶೇ 95 ಕ್ಕೂ ಹೆಚ್ಚು ಮತದಾರ ಶಿಕ್ಷಕರು ಮತಚಲಾಯಿಸಿದ್ದು ಶಿಕ್ಷಕರ ದನಿಯಾಗಿ ಉತ್ತಮ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರು ಮಾತನಾಡಿ, 23 ವಿವಿಧ ಇಲಾಖಾ ಮತಕ್ಷೇತ್ರಗ 33 ಸ್ಥಾನಗಳ ಪೈಕಿ 22 ಇಲಾಖಾ ಮತಕ್ಷೇತ್ರಗಳ 30 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯಕೆಯಾಗಿತ್ತು. ಪ್ರಾಥಮಿಕ ಶಿಕ್ಷಣ ಇಲಾಖೆಯ ಶಿಕ್ಷಕರ ಕ್ಷೇತ್ರದ ಮೂರು ಸ್ಥಾನಗಳಿಗೆ ಶಾಂತಿಯುತವಾಗಿ ಚುನಾವಣೆ ನಡೆದಿದ್ದು ಎಲ್ಲಾ ಶಿಕ್ಷಕರಿಗೆ ಧನ್ಯವಾದಗಳನ್ನು ಸಲ್ಲಿಸಬೇಕಿದೆ ಎಂದರು.

ಸರ್ಕಾರಿ ಎಲ್ಲಾ ಇಲಾಖೆಗಳ ನೌಕರರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ತಾಲ್ಲೂಕಿನಲ್ಲಿ ಯಾವುದೇ ಸಮಸ್ಯೆಯಿಲ್ಲ. ಇಲ್ಲಿನವರೆಗೆ ಪ್ರತಿತಿಂಗಳೂ ನೌಕರರ ವೇತನವು ಸರಿಯಾದ ಸಮಯಕ್ಕೆ ಆಗಿದ್ದು ವೈದ್ಯಕೀಯ ವೆಚ್ಚ ಮರುಪಾವತಿ, ಬಡ್ತಿ, ವೇತನದಲ್ಲಾಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ಸಂಘವು ಉತ್ತಮ ಕಾರ್ಯ ನಿರ್ವಹಿಸಿದೆ. ಇದೀಗ ಮತ್ತೊಂದು ಅವಧಿಗೆ ನಾಲ್ಕನೇ ಬಾರಿಗೆ ಪುನರಾಯ್ಕೆ ಮಾಡಿದ್ದು, ನೌಕರರ ಸಹಕಾರದಿಂದ ತಾಲ್ಲೂಕಿನಲ್ಲಿ ನೌಕರರ ಭವನ, ಗುರುಭವನ, ಮತ್ತಿತರ ಭವನಗಳ ನಿರ್ಮಾಣವಾಗಬೇಕಿದೆ. 2024-29 ರ ಈ ಅವಧಿಯಲ್ಲಿ ಅವೆಲ್ಲವೂ ಕೈಗೂಡಬಹುದಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ನಂತರ ಫಲಿತಂಶ ಘೋಷಣೆಯಾಗುತ್ತಿದ್ದಂತೆ ಅಪಾರ ಸಂಖ್ಯೆಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜಮಾಯಿಸಿ ಅಭಿನಂದಿಸಿ ಸಂತಸ ಹಂಚಿಕೊಂಡರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಪ್ರಧಾನಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ನಾರಾಯಣಸ್ವಾಮಿ, ಕಾರ್ಯದರ್ಶಿ ಸೀನಪ್ಪ, ಖಜಾಂಚಿ ಸುಂದರಾಚಾರಿ, ಗೌರವಾಧ್ಯಕ್ಷ ವೆಂಕಟನರಸಪ್ಪ, ಮಂಜುನಾಥ್, ಮೇಲೂರು ಶ್ರೀನಿವಾಸ್, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ನರಸಿಂಹರಾಜು, ಸಿಆರ್‌ಪಿ ಅಶೋಕ್ ಹಾಜರಿದ್ದರು.

ತಾಲ್ಲೂಕು ಶಾಖೆಗೆ ಆಯ್ಕೆಯಾದವರು:

ಮೀನುಗಾರಿಕೆ, ಪಿಎಂ ಪೋಷಣ್ ಅಭಿಯಾನ್ ಮತಕ್ಷೇತ್ರದಿಂದ ಕೆ.ಎನ್.ಸುಬ್ಬಾರೆಡ್ಡಿ, ಕೃಷಿ ಇಲಾಖೆಯಿಂದ ರವಿ.ಪಿ.ಆರ್, ಪಶುಪಾಲನಾ ಇಲಾಖೆಯಿಂದ ಡಾ.ಶ್ರೀನಾಥರೆಡ್ಡಿ, ಕಂದಾಯ ಇಲಾಖೆಯಿಂದ ಚಂದ್ರಶೇಖರ್.ಎಸ್ ಮತ್ತು ಶಶಿಧರ್, ಬಿ.ಸಿ, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಜಿ.ಪದ್ಮಾವತಮ್ಮ, ಪಂಚಾಯತ್ ರಾಜ್ ಎಂಜಿನಿಯರಿಂಗ್, ಪಿಎಂಜಿಎಸ್‌ವೈ, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಿಂದ ಟಿಪ್ಪುಸುಲ್ತಾನ್, ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಮಂಜುನಾಥ್ ಎಂ.ಮೇಲೂರು, ಎಂ.ಕೆಂಪೇಗೌಡ, ನರಸಿಂಹರೆಡ್ಡಿ, ಪ್ರೌಢಶಿಕ್ಷಣ ಇಲಾಖೆಯಿಂದ ಬೈರಾರೆಡ್ಡಿ, ವಿ, ಹರೀಶ್‌ಬಾಬು,ಸಿ.ಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಮತಕ್ಷೇತ್ರದಿಂದ ಮಧುಸೂಧನ್,ಆರ್, ಪಪೂ/ಪದವಿ ಕಾಲೇಜು ಕಡೆಯಿಂದ ಸಿ.ವೆಂಕಟಶಿವಾರೆಡ್ಡಿ, ಸಮಾಜಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ ಜಗದೀಶ್,ಎಚ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅರಣ್ಯ ಇಲಾಖೆಯಿಂದ ಎಸ್.ಎನ್.ಜಯಚಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಟಿ.ಟಿ.ನರಸಿಂಹಪ್ಪ, ಎಂ.ಎಸ್.ದೇವರಾಜು, ಲಲಿತಮ್ಮ, ರಹಮತ್ ಉಲ್ಲಾ, ಡಿ.ಎಸ್,ಅಕ್ಕಲರೆಡ್ಡಿ.ಎಸ್.ಎಂ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ಮಂಜುಳಾ.ಪಿ, ತಿಮ್ಮರಾಜು.ಕೆ, ಖಜಾನೆ ಇಲಾಖೆಯಿಂದ ಕಿರಣ್‌ಕುಮಾರ್,ಜೆ.ಎ, ಭೂದಾಖಲೆಗಳ ಕಚೇರಿ, ಭೂಮಾಪನ, ಕಂದಾಯವ್ಯವಸ್ಥೆಯಿಂದ ವಸಂತಕುಮಾರ್,ಜಿ.ಡಿ, ನ್ಯಾಯಾಂಗಇಲಾಖೆಯಿಂದ ರಘುನಂದನ್.ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನಿಂದ ಕಾತ್ಯಾಯಿನಿ,ಎಂ.ಕೆ, ಅಶ್ವತ್ಥಪ್ಪ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿದ್ಯಾ ಎ.ವಸ್ತ್ರದ, ಆಹಾರ ಮತ್ತು ನಾಗರೀಕ ಸರಬರಾಜು, ಕಾರ್ಮಿಕಇಲಾಖೆ, ಎಪಿಎಂಸಿಯಿಂದ ವಿಜಯಲಕ್ಷ್ಮಿ, ಅಬಕಾರಿ ಇಲಾಖೆಯಿಂದ ನಿತಿನ್.ಎ, ನಗರಾಭಿವೃದ್ಧಿ, ಪೌರಾಡಳಿತ, ಕೈಗಾರಿಕಾ ತರಬೇತಿ ಸಂಸ್ಥೆ ಕಡೆಯಿಂದ ಮಂಜುನಾಥ್.ಎಂ, ಸಹಕಾರ/ಸಹಕಾರ ಸಂಘ ಲೆಕ್ಕ ಪರಿಶೋಧನೆ, ಸಾಂಖ್ಯಿಕ ಇಲಾಖೆಯಿಂದ ಎಂ.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

For Daily Updates WhatsApp ‘HI’ to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!