Sidlaghatta : ಶಿಡ್ಲಘಟ್ಟ ನಗರದ ಕಾಮಾಟಿಗರಪೇಟೆಯಲ್ಲಿರುವ ಗ್ರಾಮದೇವತೆ ಶ್ರೀ ಗಂಗಮ್ಮದೇವಿ ದೇವಾಲಯ ಸಮಿತಿಯಿಂದ ಬುಧವಾರ ರಾತ್ರಿ ಶ್ರೀ ದ್ರೌಪದಮ್ಮನವರ ಐದನೇ ವರ್ಷದ ಹಸಿ ಕರಗವು ವಿಜೃಂಭಣೆಯಿಂದ ನಡೆಯಿತು.
ಶ್ರೀ ಗಂಗಮ್ಮದೇವಿ ದೇವಾಲಯ ಸಮಿತಿಯ ವತಿಯಿಂದ ನಡೆಸುವ ಹಸಿ ಕರಗವನ್ನು ಮುಳಬಾಗಿಲಿನ ನಾಗರಾಜು ಹೊತ್ತಿದ್ದರು.
ಆರತಿ ದೀಪೋತ್ಸವ, ಕಲ್ಯಾಣೋತ್ಸವ, ವಸಂತೋತ್ಸವ ಹಾಗೂ ಮಹಾ ಮಂಗಳಾರತಿ ನಡೆಯಿತು. ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಸುತ್ತ ಮುತ್ತಲಿನ ಸಾರ್ವಜನಿಕರು ಕರಗ ಮಹೋತ್ಸವದಲ್ಲಿ ಭಾಗಿಯಾಗಿದ್ದರು.