Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಕೆ.ಜಿ.ಚಿಕ್ಕಬಲ್ಲ ಗ್ರಾಮದ ಟಿ.ಎಂ.ರಾಮಕೃಷ್ಣ ಅವರ ಎರಡು ಎಕರೆ ತೋಟದಲ್ಲಿ ಬೆಳೆದ 300ಕ್ಕೂ ಹೆಚ್ಚು ಚಪ್ಪರ ಬದನೆಕಾಯಿ ಗಿಡಗಳನ್ನು ದುಷ್ಕರ್ಮಿಗಳು ಕತ್ತರಿಸಿ ನಾಶಮಾಡಿದ ಘಟನೆ ನಡೆದಿದೆ.
ತೋಟದ ಮಾಲೀಕ ಟಿ.ಎಂ. ರಾಮಕೃಷ್ಣ ಅವರು “ಶನಿವಾರ ಮಧ್ಯರಾತ್ರಿಯಲ್ಲಿ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ, ಕಾಯಿ ಬಿಡುವ ಹಂತದಲ್ಲಿದ್ದ ಸುಮಾರು 300 ಗಿಡಗಳನ್ನು ಕತ್ತರಿಸಿದ್ದಾರೆ. ಇದರಿಂದ 4 ರಿಂದ 5 ಲಕ್ಷ ರೂಗಳ ಆರ್ಥಿಕ ನಷ್ಟ ಉಂಟಾಗಿದೆ” ಎಂದು ದೂರಿದ್ದಾರೆ.
ಈ ಸಂಬಂಧ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, “ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನಮಗೆ ನ್ಯಾಯ ಒದಗಿಸಬೇಕು” ಎಂದು ಮನವಿ ಮಾಡಿದರು.