ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜನಪರ ಜಾನಪದ ಕಲೋತ್ಸವ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿತ್ತು. ಸ್ಥಳೀಯ ಕಲಾವಿದರು ಸೇರಿದಂತೆ 19 ಕಲಾ ತಂಡಗಳು ಭಾಗವಹಿಸಿ ಕಲಾ ಪ್ರದರ್ಶನವನ್ನು ನಡೆಸಿಕೊಟ್ಟವು.
ನಾಡೊಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಮತ್ತು ತಂಡದಿಂದ ತಮಟೆ ವಾದನ, ಗೊಲ್ಲಹಳ್ಳಿ ಶಿವಪ್ರಸಾದ್ ಮತ್ತು ತಂಡದ ಜನಪದ ಗಾಯನ, ಗನಾ ಅಶ್ವತ್ಥ್ ಅವರ ಸುಗಮ ಸಂಗೀತ, ಮುನಿರೆಡ್ಡಿ ಮತ್ತು ತಂಡದ ಕೊಂಡಮಾಮನ ಪದಗಳು, ಈಧರೆ ಪ್ರಕಾಶ್ ಮತ್ತು ತಂಡದಿಂದ ಗೀಗೀ ಪದ, ದೇವರಮಳ್ಳೂರು ಮಹೇಶ್ ಮತ್ತು ತಂಡದಿಂದ ಜನಪದ ಗಾಯನ, ಜಂಬೆ ಬಾಲು ಮತ್ತು ತಂಡದಿಂದ ಜಂಬೆ ಜಲಕ್, ಯಶ್ವಂತ್ ಡಾನ್ಸ್ ಅವರಿಂದ ಜಾನಪದ ನೃತ್ಯ, ಸಿಂಧೂರ ನೃತ್ಯ ಕಲಾ ಅಕಾಡೆಮಿಯಿಂದ ಜಾನಪದ ನೃತ್ಯ, ಕವಿತ ಮತ್ತು ತಂಡದಿಂದ ಸಮೂಹ ನೃತ್ಯ, ಎಂ.ಸಿ.ಜ್ಯೋತಿ ಅವರಿಂದ ಜನಪದ ಗೀತೆ, ಎನ್.ಎಂ.ನಾರಾಯಣಪ್ಪ ಅವರಿಂದ ಜನಪದ ಗೀತೆ, ರಾಜಪ್ಪ ಮತ್ತು ತಂಡದಿಂದ ಹರಿಕಥೆ, ಗೊಟ್ಲಕುಂಟೆ ಗ್ರಾಮೀಣ ಕಲಾ ತಂಡದಿಂದ ನಾಸಿಕ್ ಡೊಳ್ಳು, ಆರ್.ಡಿ.ಮಂಜುನಾಥ್ ಮತ್ತು ತಂಡದಿಂದ ಕರಗ ನೃತ್ಯ, ಮುನಿಕೃಷ್ಣಪ್ಪ ಮತ್ತು ತಂಡದಿಂದ ಕೀಲು ಕುದುರೆ, ವೈ.ಟಿ.ಪ್ರಸನ್ನ ಮತ್ತು ತಂಡದಿಂದ ಡೊಳ್ಳು ಕುಣಿತ, ಆಂಜಿನಪ್ಪ ಮತ್ತು ತಂಡದಿಂದ ತಮಟೆ ವಾದನ, ನರಸಿಂಹಮೂರ್ತಿ ಮತ್ತು ತಂಡದಿಂದ ಅರೆ ವಾದ್ಯ ಪ್ರದರ್ಶನಗಳು ನಡೆದವು.
ಶಾಸಕ ವಿ ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಗ್ರಾಮ ಪಂಚಾಯಿತಿ ಪಿಡಿಒ ಕಾತ್ಯಾಯಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರವತಿ, ಸದಸ್ಯರಾದ ಪ್ರೇಮ, ಸಂತೋಷ್, ದೇವರಾಜು, ಗ್ರಾಮದ ಮುಖಂಡರು ಮುನಿಕೆಂಪಣ್ಣ, ಮುನೇಗೌಡ, ರಾಮಕೃಷ್ಣ, ಚನ್ನಪ್ಪ ಹಾಜರಿದ್ದರು.