23.1 C
Sidlaghatta
Monday, December 23, 2024

ಜಿಲ್ಲೆಯಲ್ಲಿಯೇ ಪ್ರಥಮ ಮಾಡ್ಯುಲಸ್ ಕೋವಿಡ್ ಕೇರ್ ಸೆಂಟರ್ ನಿರ್ಮಾಣ

- Advertisement -
- Advertisement -

ಕೋವಿಡ್ ಮೂರನೇ ಅಲೆಯ ವಿರುದ್ಧ ಜಿಲ್ಲಾಡಳಿತ ಮುಂದಾಲೋಚನೆ ವಹಿಸಿದೆ. ತಾಲ್ಲೂಕಿನ ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಅತ್ಯಾಧುನಿಕ 30 ಹಾಸಿಗೆಗಳ ಸಂಪೂರ್ಣ ಆಮ್ಲಜನಕ ವ್ಯವಸ್ಥೆಯುಳ್ಳ ಮಾಡ್ಯುಲಸ್ ಕೋವಿಡ್ ಕೇರ್ ಸೆಂಟರನ್ನು ನಿರ್ಮಿಸಲಾಗಿದೆ. ಇದು ಅಕ್ಟೋಬರ್ 30 ರಂದು ಮುಖ್ಯಮಂತ್ರಿಯವರಿಂದ ಉದ್ಘಾಟನೆಗೊಳ್ಳಲಿದೆ.

 ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿಯೇ ನಿರ್ಮಿಸಲಾಗಿರುವ ಈ ಮಾಡ್ಯುಲಸ್ ಆಸ್ಪತ್ರೆಯು ತುರ್ತು ಪರಿಸ್ಥಿತಿಯಲ್ಲಿ ಬೇಕಾದ ಕಡೆಗೆ ಸ್ಥಳಾಂತರಗೊಳಿಸಬಹುದಾಗಿದೆ. ಸಾಮಾನ್ಯವಾಗಿ ಒಂದು ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಒಂದು ವರ್ಷವಾದರೂ ಬೇಕಾಗುತ್ತದೆ. ಆದರೆ, ಕೇವಲ ಒಂದು ವಾರದೊಳಗೆ ಈ ಮಾಡ್ಯುಲರ್ ಆಸ್ಪತ್ರೆಯು ತಲೆಯೆತ್ತಿದೆ.

Sidlaghatta Jangamakote Covid Modulus Hospital Care Centre first in Chikkaballapur District ಮಾಡ್ಯುಲಸ್ ವಸತಿ (ಮಾಡ್ಯುಲಸ್ ಹೌಸಿಂಗ್) ಎಂಬ ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (ಐ.ಐ.ಟಿ.-ಎಂ) ನ ನವೋದ್ಯಮವು ಮೆಡಿಕ್ಯಾಬ್ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಿದೆ. ಇದರಿಂದ  3 ವಾರಗಳಲ್ಲಿ 100 ಹಾಸಿಗೆ ಸಾಮರ್ಥ್ಯದ ವಿಸ್ತರಣಾ ಸೌಲಭ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇದರಲ್ಲಿ ತೀವ್ರ ನಿಗಾ ಘಟಕ (ಐ.ಸಿ.ಯು.)ಕಕ್ಕಾಗಿಯೇ ಇರುವ ವಲಯವನ್ನು ಹೊಂದಿರುವಂತೆ ವಿನ್ಯಾಸ ಮಾಡಲಾಗಿರುತ್ತವೆ. ಇಲ್ಲಿ ಎಲ್ಲಾ ಜೀವರಕ್ಷಕ ಸಲಕರಣೆಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಅಳವಡಿಸಿರುತ್ತಾರೆ. ಇವುಗಳನ್ನು ಭವಿಷ್ಯದಲ್ಲಿ ವಿಪತ್ತು ಪ್ರತಿಕ್ರಿಯೆಯಾಗಿ ವಾರದೊಳಗೆ ಬೇರೆಡೆಗೆ ಸ್ಥಳಾಂತರಿಸಬಹುದಾಗಿರುತ್ತದೆ. ಇಂತಹ ಆಸ್ಪತ್ರೆಗಳು ಕೊರೊನಾ ವಿರುದ್ಧ ಹೋರಾಟದಲ್ಲಿ ಎದುರಾಗುವ ಮೂಲಸೌಕರ್ಯಗಳ ಸಮಸ್ಯೆಯನ್ನು ನಿವಾರಣೆ ಮಾಡಬಲ್ಲವು ಮತ್ತು ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳಲ್ಲಿ ಮೂಲಸೌಕರ್ಯ ಕೊರತೆಯನ್ನು ತುಂಬಬಲ್ಲವು.

 ಜಂಗಮಕೋಟೆಯಲ್ಲಿನ ಮಾಡ್ಯುಲಸ್ ಕೋವಿಡ್ ಕೇರ್ ಸೆಂಟರಿನಲ್ಲಿ ನಾಲ್ಕು ಹಾಸಿಗೆಗಳ ಐಸಿಯು, ಗಂಡಸರಿಗಾಗಿ ಮತ್ತು ಹೆಂಗಸರಿಗಾಗಿ ಪ್ರತ್ಯೇಕವಾದ ತಲಾ 13 ಹಾಸಿಗೆಗಳ ವಾರ್ಡ್ ಗಳು ಮತ್ತು ಒ.ಪಿ.ಡಿ ಗಾಗಿ ಒಂದು ಪ್ರತ್ಯೇಕ ವಾರ್ಡ್ ಗಳನ್ನು ಹೊಂದಿದೆ.

 “ಕೊರೊನಾ ಮೂರನೇ ಅಲೆಯಾಗಲೀ ಅಥವಾ ಕೋವಿಡ್ ಪ್ರಕರಣಗಳು ಈ ಭಾಗದಲ್ಲಿ ಎಲ್ಲಿಯೇ ಕಂಡುಬರಲಿ ನಾವಿಲ್ಲಿ ಸಮರ್ಥವಾಗಿ ಚಿಕಿತ್ಸೆ ನೀಡಬಹುದಾಗಿದೆ. ಜಂಗಮಕೋಟೆ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ಮತ್ತು ಈ ಭಾಗದ ಜನರಿಗೆ ಈ ಆಸ್ಪತ್ರೆಯು ವರದಾನವಾಗಲಿದೆ” ಎನ್ನುತ್ತಾರೆ ವೈದ್ಯಾಧಿಕಾರಿ ಡಾ.ಅಂಬಿಕಾ.

 ನರೇಗಾ ಯೋಜನೆಯಿಂದ ಆಸ್ಪತ್ರೆ ಸುತ್ತ ಅಭಿವೃದ್ಧಿ ಕಾಮಗಾರಿಗಳು :

Sidlaghatta Jangamakote Covid Modulus Hospital Care Centre first in Chikkaballapur District ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ನೆರವು ಹಾಗೂ ನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಆಸ್ಪತ್ರೆಯ ಸುತ್ತ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಸುಂದರ ಉದ್ಯಾನವನ, ನಡೆದಾಡಲು ವಾಕಿಂಗ್ ಪಾತ್, ಯೋಗಾ ಕಲಿಕೆಗೆ ಸ್ಥಳಾವಕಾಶ, ಮನೋಲ್ಲಾಸಕ್ಕೆ ಹಸಿರು ಹುಲ್ಲುಹಾಸು, ವಿವಿಧ ಹೂಗಿಡಗಳು, ಮರಗಿಡಗಳು, ಔಷಧೀಯವನ ನಿರ್ಮಾಣ ಭರದಿಂದ ಸಾಗಿದೆ. ಇಪ್ಪತ್ತು ಸಾವಿರ ಗ್ಯಾಲನ್ ಗೂ ಅಧಿಕ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಿದ್ದು, ಆಸ್ಪತ್ರೆಯ ಮೇಲೆ ಬಿದ್ದ ಮಳೆ ನೀರನ್ನೆಲ್ಲಾ ಅದರೊಳಗೆ ಹೋಗಿ ಶೇಖರಣೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ.

 ವಾಹನ ನಿಲುಗಡೆಗೆ ಸ್ಥಳಾವಕಾಶ, ಆಂಬುಲೆನ್ಸ್ ನಿಲುಗಡೆಗೆ ಶೆಡ್, ಆಸ್ಪತ್ರೆಯ ಮುಂದೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಿಸಲಾಗುತ್ತಿದೆ. ಆಮ್ಲಜನಕದ ಉತ್ಪಾದನಾ ಘಟಕವನ್ನೂ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಡೆಂಗ್ಯೂ, ಮಲೇರಿಯಾ ಹರಡುವ ಸೊಳ್ಳೆಗಳ ಲಾರ್ವಾ ಕಬಳಿಸುವ ಮೀನುಗಳಾದ ಗಪ್ಪಿ ಮತ್ತು ಗಾಂಬೂಸಿಯಾ ಬೆಳೆಸಲು ನೀರಿನ ತೊಟ್ಟಿಯನ್ನೂ ಸಹ ನಿರ್ಮಾಣ ಮಾಡಲಾಗಿದೆ.

 

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!