ನಗರದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಕೋವಿಡ್ ಸಹಾಯವಾಣಿ ಸ್ಥಾಪನೆ ಮಾಡಿರುವುದಾಗಿ ತಹಶೀಲ್ದಾರ್ ರಾಜೀವ್ ತಿಳಿಸಿದರು.
ದಿನದ 24 ಗಂಟೆಗಳ ಕಾಲ ಕೋವಿಡ್ ನಿಯಂತ್ರಣ ಕೊಠಡಿ ಕಾರ್ಯ ನಿರ್ವಹಿಸಲಿದ್ದು, ಸೊಂಕಿತರಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ. ತುರ್ತು ಅಮ್ಲಜನಕ, ರೆಮ್ ಡೆಸಿವಿರ್ ಮುಂತಾದೌಷಧಿ ಸೇರಿದಂತೆ ಅಗತ್ಯ ಇರುವವರಿಗೆ ಮಾರ್ಗದರ್ಶನ ನೀಡಲಿದೆ. ರೋಗಿಗಳಿಗೆ ಅವಶ್ಯಕತೆ ಇದ್ದಲ್ಲಿ ಆಸ್ಪತ್ರೆಯಲ್ಲಿನ ಬೆಡ್ ಗಳು ಚಿಕಿತ್ಸೆ ಮುಂತಾದ ಎಲ್ಲಾ ಮಾಹಿತಿಯನ್ನು ನಿಯಂತ್ರಣ ಕೊಠಡಿಯಲ್ಲಿ ಪಡೆಯಬಹುದಾಗಿದೆ .ದೂರವಾಣಿ ಸಂಖ್ಯೆ 08158 256763 ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತದೆ. ಇದರ ಸದುಪಯೋಗವನ್ನು ಪಡೆಯುವಂತೆ ಅವರು ಕೋರಿದ್ದಾರೆ.