Sidlaghatta : ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಜನ್ಮದಿನದ ಹಾಗೂ ದೀನದಯಾಳ್ ಉಪಾಧ್ಯಾಯ ರವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿರವರ ಎಂಟು ವರ್ಷದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ LED TVಯ ಮೂಲಕ ಜನರಿಗೆ ಅರಿವು ಮೂಡಿಸುವ ಸಲುವಾಗಿ ಎಲ್ ಇ ಡಿ ಟಿವಿ ವಾಹನಗಳಿಗೆ BJP ಜಿಲ್ಲಾ ಕಾರ್ಯದರ್ಶಿ ದೇವರಾಜ್ ಹಾಗೂ ಗ್ರಾಮಂತರ ಮಂಡಲದ ಅಧ್ಯಕ್ಷ ಸುರೇಂದ್ರ ಗೌಡ ರವರು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಾಂತರ ಮಂಡಲದ ಅಧ್ಯಕ್ಷ ಸುರೇಂದ್ರ ಗೌಡ ರವರು ಪ್ರಧಾನಮಂತ್ರಿ ನರೇಂದ್ರ ಮೋದಿ ರವರ ಎಂಟು ವರ್ಷಗಳ ಕಾಲ ನಮ್ಮ ದೇಶದ ಅಭಿವೃದ್ಧಿಯ ಬಗ್ಗೆ ನಾವು ಒಂದು ಕಿರುಚಿತ್ರದ ಮೂಲಕ ಎರಡು ವಾಹನಗಳನ್ನು ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿ ಗ್ರಾಮ ಪಂಚಾಯತಿ ಹಾಗೂ ಗ್ರಾಮಗಳಲ್ಲಿ ಈ ಕಿರುಚಿತ್ರ ಪ್ರದರ್ಶನ ಮಾಡಬೇಕೆಂದು 20 ದಿನಗಳ ಕಾಲ ನಮ್ಮ ಜಿಲ್ಲಾ ಕಾರ್ಯದರ್ಶಿಎನ್.ದೇವರಾಜ್ ರವರು ನೇತೃತ್ವದಲ್ಲಿ ಎಲ್ಇಡಿ ಎರಡು ವಾಹನಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಎನ್.ದೇವರಾಜ್ ನರೇಂದ್ರ ಮೋದಿ ರವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಅವರು ಮಾಡಿರುವ ಸಾಧನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಲು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಪಡಿಸಲು ಎರಡು ವಾಹನಗಳಿಗೆ ಚಾಲನೆ ನೀಡಲಾಗುತ್ತಿದೆ. ಯುವಕರು ಮೋದಿ ಅವರ ಜೀವನದಿಂದ ಪ್ರೇರಣೆ ಪಡೆದು ಮೋದಿ ಅವರ ಗುಣಗಳನ್ನು ನಾವು ಸಹ ನಾವು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರಿಕೆರೆ ಮುನಿರಾಜು, ಪ್ರಧಾನ ಕಾರ್ಯದರ್ಶಿ ರಜನಿಕಾಂತ್ ಬಾಬು, ನಟರಾಜ್, ಉಪಾಧ್ಯಕ್ಷ ರಾಮಚಂದ್ರ, ಅರಿಕೆರೆ ಶ್ರೀನಿವಾಸ್, ಭಕ್ತರಹಳ್ಳಿ ನಾರಾಯಣಸ್ವಾಮಿ, ಗುಡಿಹಳ್ಳಿ ಮಂಜುನಾಥ್, ಜಯಸಿಂಹ, ಚೀಮಂಗಲ ಗ್ಯಾಸ್ ನಾರಾಯಣಸ್ವಾಮಿ ಹಾಗೂ ಗ್ರಾಮಸ್ಥರು ಹಾಜರಿದ್ದರು.