ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಚಿಕ್ಕದಾಸರಹಳ್ಳಿ ಮಾರ್ಗಮಧ್ಯ ಬುಧವಾರ ರಾತ್ರಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮಳಮಾಚನಹಳ್ಳಿ ಗ್ರಾಮದ ಅಭಿ (20) ಹಾಗೂ ಚಿಕ್ಕದಾಸರಹಳ್ಳಿ ಗ್ರಾಮದ ಕೃಷ್ಣಪ್ಪ (30) ಸಾವನ್ನಪ್ಪಿದ್ದು, ಭರತ್ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ. ಮಳಮಾಚನಹಳ್ಳಿ ಅಭಿ ತಮ್ಮ ಬುಲೆಟ್ ಬೈಕ್ ನಲ್ಲಿ ಇಬ್ಬರನ್ನು ಕೂರಿಸಿಕೊಂಡು ಚಿಕ್ಕದಾಸರಹಳ್ಳಿ ಯಿಂದ ಮಳಮಾಚನಹಳ್ಳಿ ಕಡೆ ಹೊರಟಿದ್ದರು. ಕೃಷ್ಣಪ್ಪ, ಮಳಮಾಚನಹಳ್ಳಿ ಗೇಟ್ ಬಳಿ ಅಂಗಡಿಯಲ್ಲಿ ತೋಟದಲ್ಲಿ ಬಳಸುವ ಪೈಪುಗಳನ್ನು ತೆಗೆದುಕೊಂಡು ಚಿಕ್ಕದಾಸರಹಳ್ಳಿ ತೋಟದ ಮನೆ ಬಳಿ ಹೊರಟಿದ್ದಾಗ ಘಟನೆ ನಡೆದಿದೆ.
ಸ್ಥಳಕ್ಕೆ ಹೊಯ್ಸಳ ಗಸ್ತು ವಾಹನ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.