Sidlaghatta : ಆಗಸ್ಟ್ 9 ರ ಬುಧವಾರದಂದು ನಗರ ಸೇರಿದಂತೆ ಗ್ರಾಮೀಣ ಭಾಗದ ಹಲವು ಕಡೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುವುದೆಂದು (Power Cut) BESCOM ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ವಿ.ಶಿವಪ್ರಸಾದ್‌ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಲೈನಿನ ಕಾಮಗಾರಿ ಕೈಗೊಳ್ಳುವುದರಿಂದ ಎಫ್-01 ಲೋಕಲ್ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ನಗರದ ಉಲ್ಲೂರು ಪೇಟೆ, ಮಯೂರವೃತ್ತ, ಗಾಂಧಿನಗರ, ವಿಜಯಲಕ್ಷ್ಮಿವೃತ್ತ, ಹಾಗು ಎಫ್-10 ಎನ್.ಜೆ.ವೈ ಹನುಮಂತಪುರ ಫೀಡರ್‌ನಿಂದ ಸರಬರಾಜಾಗುವ ಹನುಮಂತಪುರ, ವರದನಾಯಕನಹಳ್ಳಿ, ಹರಳಹಳ್ಳಿ, ಗುಡಿಹಳ್ಳಿ, ಚೀಮನಹಳ್ಳಿ, ಅಬ್ಲೂಡು, ಶೆಟ್ಟಹಳ್ಳಿ, ಮಲ್ಲಹಳ್ಳಿ, ಕೋಟಹಳ್ಳಿ, ಚಾಗೆ, ಕೆಂಪನಹಳ್ಳಿ, ತಾತಹಳ್ಳಿ, ಇದ್ಲೂಡು, ಲಕ್ಕಹಳ್ಳಿ, ಎಲ್ ಮುತ್ತುಕದಹಳ್ಳಿ ಹಾಗು ಶಿಲೇಮಾಕಲಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸಬೇಕೆಂದು ಅವರು ಕೋರಿದ್ದಾರೆ.