Sidlaghatta : ಶಿಡ್ಲಘಟ್ಟ ಕ್ಷೇತ್ರದ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸೋಮವಾರ ನಾಲ್ವರು ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಒಟ್ಟಾರೆಯಾಗಿ ಆರು ಮಂದಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಜೆಡಿಎಸ್ ಪಕ್ಷದ ಬಿ.ಫಾರಂ ಜೊತೆಯಲ್ಲಿ ಮೇಲೂರು ಬಿ.ಎನ್.ರವಿಕುಮಾರ್ ಮತ್ತು ಬಿಜೆಪಿ ಬಿ.ಫಾರಂ ಜೊತೆ ಸೀಕಲ್ ರಾಮಚಂದ್ರಗೌಡ ನಾಮಪತ್ರವನ್ನು ಸಲ್ಲಿಸಿದರು. ಕಾಂಗ್ರೆಸ್ ಪಕ್ಷದಿಂದ ರಾಜೀವ್ ಗೌಡ ನಾಮಪತ್ರವನ್ನು ಸಲ್ಲಿಸಿದರಾದರೂ ಅವರಿಗೆ ಕಾಂಗ್ರೆಸ್ ಪಕ್ಷ ಇನ್ನೂ ಬಿಫಾರಂ ಕೊಟ್ಟಿಲ್ಲ.
ಇನ್ನುಳಿದಂತೆ ಕೆ.ಆರ್.ಎಸ್. ಪಕ್ಷದಿಂದ ಎಂ.ಕೆಂಪೇಗೌಡ, ಸ್ವತಂತ್ರ ಅಭ್ಯರ್ಥಿಗಳಾಗಿ ಕೆ.ಆರ್.ವೆಂಕಟರಾಜು ಹಾಗೂ ಸಂದೀಪ್ ರೆಡ್ಡಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವಾಗ ಮೇಲೂರು ಬಿ.ಎನ್.ರವಿಕುಮಾರ್ ಅವರು ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದು ಚರಾಸ್ತಿ ₹ 62.05 ಲಕ್ಷ ಇದೆ. ಸ್ಥಿರಾಸ್ತಿಯಲ್ಲಿ ಸ್ವಯಾರ್ಜಿತ ಸ್ವತ್ತು ₹ 75 ಲಕ್ಷ ಹಾಗೂ ಪಿತ್ರಾರ್ಜಿತ ಸ್ವತ್ತು ₹ 15 ಲಕ್ಷ ಇದೆ.
ಬಿಜೆಪಿ ಪಕ್ಷದ ರಾಮಚಂದ್ರ ಗೌಡ ಅವರು ಘೋಷಿಸಿರುವ ಆಸ್ತಿ ವಿವರದಲ್ಲಿ ಚರಾಸ್ತಿ ₹ 93.35 ಕೋಟಿ ಇದೆ. ಅವರ ಪತ್ನಿಯ ಚರಾಸ್ತಿ ₹ 64.03 ಲಕ್ಷ, ಸ್ಥಿರಾಸ್ತಿಯಲ್ಲಿ ₹ 61.28 ಕೋಟಿ ಲಕ್ಷ, ಅವರ ಪತ್ನಿಯ ಸ್ಥಿರಾಸ್ತಿ ₹ 3.03 ಕೋಟಿ ಇದೆ.
ವಿಶೇಷವೆಂದರೆ, ರಾಮಚಂದ್ರ ಗೌಡ ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ “ದೃಢೀಕರಣ” ಮಾಡಿರುವೆಡೆ, ಇಸವಿ 2023 ರ ಬದಲು 2024 ಇದೆ!
Six Candidates File Nomination Papers for Sidlaghatta Assembly General Election
Sidlaghatta : As on Monday, six candidates filed their nomination papers for the upcoming Sidlaghatta assembly general election, with four of them officially submitting their papers on that day.
Among the candidates who filed their nomination papers on Monday were BN Ravikumar of Melur, who is running with the JDS Party’s B.Form, and Seekal Ramachandra Gowda, who is running with the BJP’s B.Form. Rajeev Gowda submitted his nomination paper from the Congress party, but has not been given a B.Form by the party yet.
The other two candidates who filed their nomination papers were K.R.S. M. Kempegowda from his party and independent candidates KR Venkataraju and Sandeep Reddy.
During the filing of his nomination papers, BN Ravikumar declared his assets worth ₹62.05 lakh. This included a self-acquired immovable asset worth ₹75 lakh and an inherited asset worth ₹15 lakh.
Meanwhile, Ramachandra Gowda of the BJP party declared his inheritance to be worth ₹93.35 crore. His wife’s inheritance was valued at ₹64.03 lakh, and their combined immovable property was valued at ₹61.28 crore, with his wife’s share amounting to ₹3.03 crore.
It is worth noting that Ramachandra Gowda’s affidavit contained an error, with the year listed as 2024 instead of 2023.