23.1 C
Sidlaghatta
Sunday, December 22, 2024

ರಾಜೀವ್ ಗೌಡನ ಪರ “ಕೈ” ಎತ್ತಿದ ಶಾಸಕ ವಿ.ಮುನಿಯಪ್ಪ

- Advertisement -
- Advertisement -

Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಿ ಫಾರಂ ಗಾಗಿ ಮೂರು ಬಣಗಳು ಇದುವರೆಗೂ ಪೈಪೋಟಿ ನಡೆಸಿದ್ದವು. ಹಾಲಿ ಶಾಸಕ ವಿ.ಮುನಿಯಪ್ಪ, ಎಬಿಡಿ ಟ್ರಸ್ಟ್ ನ ಅಧ್ಯಕ್ಷ ರಾಜೀವ್ಗೌಡ ಮತ್ತು ಎಸ್ಎನ್ ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಪುಟ್ಟು ಆಂಜಿನಪ್ಪ ಮೂವರೂ ಬಿ ಫಾರಂ ಗಾಗಿ ಪ್ರಯತ್ನ ನಡೆಸಿದ್ದರು.

ಕಳೆದ ತಿಂಗಳು ಇದ್ದಕ್ಕಿದ್ದ ಹಾಗೆ ಶಾಸಕ ವಿ.ಮುನಿಯಪ್ಪ ಅವರು ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ತಮ್ಮ ಮಗ ಶಶಿಧರ್ ಕೂಡ ಸ್ಪರ್ಧಿಸುವುದಿಲ್ಲ ಎಂದಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಅವರ ಹೆಸರನ್ನು ಸೂಚಿಸಿ ಅವರನ್ನು ಬೆಂಬಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದರು. ಅವರ ಆಯ್ಕೆಯನ್ನು ಕೆಲವು ಕಾಂಗ್ರೆಸ್ ಮುಖಂಡರು ವಿರೋಧಿಸಿದ್ದರು.

ಜಕ್ಕೂರಿನ ಅಟ್ಟೈಡ್ ಹೋಟೆಲ್ ನಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದ್ದಾರೆ. ಶಾಸಕ ವಿ.ಮುನಿಯಪ್ಪ, ಅವರ ಮಗ ಶಶಿಧರ್ ಇಬ್ಬರೂ ಎಬಿಡಿ ಟ್ರಸ್ಟ್ ನ ಅಧ್ಯಕ್ಷ ರಾಜೀವ್ ಗೌಡ ಅವರು ಅಭ್ಯರ್ಥಿಯಾಗಲಿ ತಾವುಗಳು ಬೆಂಬಲಿಸುತ್ತೇವೆಂದು ಹೇಳುವ ಮೂಲಕ ಹೊಸ ತಿರುವು ನೀಡಿದ್ದಾರೆ. ಈ ಸಭೆಯಲ್ಲಿ ಸೇರಿದ್ದ ವಿ.ಮುನಿಯಪ್ಪ ಅವರ ಬೆಂಬಲಿಗರೂ ಕೂಡ ಈ ತೀರ್ಮಾನಕ್ಕೆ ಅನುಮೋದಿಸಿದ್ದಾರೆ.

ಶಾಸಕ ವಿ.ಮುನಿಯಪ್ಪ ಅವರ ಮಗ ಶಶಿಧರ್ ಈ ವಿಚಾರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಂ.ಮುನಿಯಪ್ಪ ಮತ್ತು ಮೇಲೂರು ಮುರಳಿ ಅವರ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಲ್ಲದೆ, ಶಾಸಕ ವಿ.ಮುನಿಯಪ್ಪ ಕೂಡ ಒಪ್ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ, ಎಬಿಡಿ ಟ್ರಸ್ಟ್ ನ ಅಧ್ಯಕ್ಷ ರಾಜೀವ್ ಗೌಡ, ಶಾಸಕರು ಹಾಗೂ ಅವರ ಮಗ ನೀಡುವ ನಿರ್ದೇಶನದ ಮೇರೆಗೆ ಚುನಾವಣೆಯನ್ನು ಎದುರಿಸುತ್ತೇನೆ. ಅವರ ಅನುಮತಿ ಪಡೆಯದೇ ಯಾವ ಕೆಲಸವನ್ನೂ ಮಾಡುವುದಿಲ್ಲ. ಈಗ ಕಾಂಗ್ರೆಸ್ ನಲ್ಲಿರುವುದು ಒಂದೇ ಬಣ. ಒಗ್ಗಟ್ಟಿನಿಂದ ಚುನಾವಣೆ ಎದುಸುತ್ತೇನೆ. ಯಾವ ಮುಖಂಡರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ.

ಈ ಬಗ್ಗೆ ಶನಿವಾರ ಶಾಸಕ ವಿ.ಮುನಿಯಪ್ಪ ಅವರ ಮಗ ಶಶಿಧರ್ ಅವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಗಿತ್ತು. ಅಲ್ಲಿ ಭಾಗವಹಿಸಿದ್ದ ಅವರ ಬೆಂಬಲಿಗರೊಂದಿಗೆ ಶಶಿಧರ್ ಅವರು ರಾಜೀವ್ ಗೌಡ ಅವರನ್ನು ಬೆಂಬಲಿಸುವುದು ಸೂಕ್ತ ಎಂದಿದ್ದರು.

ಎಸ್ಎನ್ ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಪುಟ್ಟು ಆಂಜಿನಪ್ಪ ಅವರ ತೋಟದ ಮನೆಗೆ ಇತ್ತೀಚೆಗೆ ಶಾಸಕ ವಿ.ಮುನಿಯಪ್ಪ ಭೇಟಿ ನೀಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿ.ಮುನಿಯಪ್ಪ ಅವರು ಪುಟ್ಟು ಆಂಜಿನಪ್ಪ ಅವರನ್ನು ಬೆಂಬಲಿಸಬಹುದು ಎಂಬ ಊಹಾಪೋಹ ಎದ್ದಿತ್ತು.

ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿಯಾಗಿ ಪುಟ್ಟು ಆಂಜಿನಪ್ಪ ಅವರು ಸ್ಪರ್ಧಿಸಿ ಸುಮಾರು ಹತ್ತು ಸಾವಿರದಷ್ಟು ಮತ ಪಡೆದಿದ್ದರು. ಕಳೆದ ಬಾರಿ ಬಂಡಾಯವಾಗಿ ಏಕೆ ಸ್ಪರ್ಧಿಸಿದ್ದು ಮತ್ತು ಈ ಬಾರಿ ಶಾಸಕ ವಿ.ಮುನಿಯಪ್ಪ ಸ್ಪರ್ಧಿಸಿದರೆ ಬೆಂಬಲಿಸುವಿರಾ ಎಂಬೆರಡು ಪ್ರಶ್ನೆಗಳಿಗೆ ಉತ್ತರ ನೀಡದ ಕಾರಣ ರಾಜೀವ್ ಗೌಡ ಅವರನ್ನು ಬೆಂಬಲಿಸುತ್ತಿರುವುದಾಗಿ ವಿ.ಮುನಿಯಪ್ಪ ಅವರ ಬೆಂಬಲಿಗರು ಹೇಳುತ್ತಾರೆ.

ಕಳೆದ ನವೆಂಬರ್ 30 ರಂದು ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಿಟ್ಟು ಕೊಡಲು ನನಗೆ 30 ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು ಎಂದು ಶಾಸಕ ವಿ.ಮುನಿಯಪ್ಪ ಆರೋಪಿಸಿದ್ದರು. ಇದೀಗ ಅದೇ ರಾಜೀವ್ ಗೌಡ ನನ್ನು ಬೆಂಬಲಿಸುವ ಮೂಲಕ ಶಾಸಕ ವಿ.ಮುನಿಯಪ್ಪ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದಾರೆ.

ಈಗ ಇದ್ದಕ್ಕಿದ್ದ ಹಾಗೆ ರಾಜೀವ್ ಗೌಡ ಪರ ತಮ್ಮ ಬೆಂಬಲಿಗರನ್ನು ಒಪ್ಪಿಸಿದ್ದು ಏಕೆ ಎಂಬ ಪ್ರಶ್ನೆ ಅನೇಕ ಕಾರ್ಯಕರ್ತರಲ್ಲಿ ಮೂಡಿದೆ. ಬಹುಶಃ ಕಾಲವೇ ಇದಕ್ಕೆ ಉತ್ತರ ನೀಡಬಹುದು.

The Shidlaghatta Assembly Constituency is embroiled in political drama as the incumbent MLA withdraws his candidacy and supports ABD Trust Chairman Rajiv Gowda, sparking controversy.

Congress Political Drama Unfolds in Sidlaghatta Assembly Constituency

Sidlaghatta : In the race for the Congress B Form of the Sidlaghatta Assembly Constituency, three factions have been vying for the spot. The incumbent MLA, V. Muniyappa, ABD Trust Chairman Rajiv Gowda, and SN Kriya Trust Chairman Puttu Anjinappa have all thrown their hats in the ring.

However, last month, V. Muniappa made a surprising announcement, stating that he and his son Shashidhar would not be contesting the election. Instead, he proposed the name of Byalahalli Govindegowda, the Chairman of the DCC Bank, and urged his supporters to back him. However, this decision was met with opposition from some Congress leaders.

In a recent meeting held at Attide Hotel in Jakkur, V. Muniyappa and his son Shashidhar reversed their decision and announced their support for Rajiv Gowda. This move was approved by the MLA’s supporters who were present at the meeting. Shashidhar officially announced the decision through Block Congress President HM Muniyappa and Melur Murali, and V. Muniyappa also agreed to support Rajiv Gowda as a candidate.

Rajiv Gowda, President of ABD Trust, has stated that he will contest the election as per the directions given by the MLA and his son, and that he will not take any action without their permission. He has also emphasized the importance of unity within the Congress and stated that no leader will be ignored.

Speculation arose when a video of V. Muniyappa’s recent visit to Puttu Anjinappa’s farm house went viral on social media. Some believed that V. Muniyappa might support Puttu Anjinappa, who had contested as a rebel candidate of Congress in the last assembly elections and garnered around ten thousand votes. However, V. Muniyappa’s supporters have stated that they are backing Rajiv Gowda because he did not answer two important questions: why he contested as a rebel in the last election, and whether he would support V. Muniyappa if he contested this time around.

In a controversial statement made on November 30, V. Muniyappa alleged that a faction had offered him 30 crore rupees to give up the Congress ticket of Sidlaghatta Assembly Constituency. This statement has sparked discussions within the political arena.

Many activists are now questioning the sudden change of heart from both V. Muniyappa and his son, and their decision to support Rajiv Gowda. Only time will tell the true motives behind this move.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!