26.1 C
Sidlaghatta
Monday, December 23, 2024

ಭಷ್ಟಾಚಾರ ನಿಗ್ರಹಕ್ಕೆ ಸ್ವಾಭಿಮಾನಿಗಳ ಸಮಾನ ಮನಸ್ಕರ ವೇದಿಕೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸ್ವಾಭಿಮಾನಿಗಳ ಸಮಾನ ಮನಸ್ಕರ ವೇದಿಕೆಯ ಪ್ರಥಮ ಸಭೆಯಲ್ಲಿ ಸ್ವಾಭಿಮಾನಿಗಳ ಸಮಾನ ಮನಸ್ಕರ ವೇಧಿಕೆ ಅಧ್ಯಕ್ಷ ಮಳ್ಳೂರು ಶಿವಣ್ಣ ಅವರು ಮಾತನಾಡಿದರು.

ಧರ್ಮಾತೀತವಾಗಿ, ಜಾತ್ಯಾತೀತವಾಗಿ, ಪ್ರಾಂತ್ಯಾತೀತವಾಗಿ ತಾಲ್ಲೂಕಿನ ಎಲ್ಲಾ ಭಾಗಗಳಿಂದ ಎಲ್ಲಾ ಸಂಘಟನೆಗಳ ಜನಪರ ಚಟುವಟಿಕೆಗಳನ್ನು ಮಾಡಿರುವ ಸಮಾನ ಮನಸ್ಕರು ಸೇರಿ “ಸ್ವಾಭಿಮಾನಿಗಳ ಸಮಾನ ಮನಸ್ಕರ ವೇದಿಕೆ” ಎಂದು ರಚನೆ ಮಾಡಿದ್ದೇವೆ ಎಂದು ತಿಳಿಸಿದರು.

ನಮ್ಮ ತೆರಿಗೆ ಹಣದಲ್ಲಿ ನಡೆಯುತ್ತಿರುವ, ಜನರಿಂದ ಜನತೆಗಾಗಿ ಜನರೆ ನಡೆಸುವ ಸರ್ಕಾರಗಳಿದ್ದರೂ ಇಂದು ನಮಗೆ ಸಿಗಬೇಕಾದ ಸೌಲತ್ತುಗಳು ಸಿಗದಾಗಿವೆ. ಜನರಿಂದ ಜನರಿಗಾಗಿ ಜನರೇ ನಡೆಸುವ ಸರ್ಕಾರ ಹೋಗಿ ದುಡ್ದು ಕೊಟ್ಟು ದುಡ್ಡು ತೆಗೆದುಕೊಳ್ಳುವಂತಹ, ದುಡ್ಡುಗಾಗಿ ತೊಂದರೆ ನೀಡುವಂತ ಸರ್ಕಾರ ಆಗಿದೆ.

ಗ್ರಾಮ ಪಂಚಾಯಿತಿ ಪಿಡಿಒಗಳು ತಹಶೀಲ್ದಾರ್ ರವರಿಗಿಂತ ಶಕ್ತಿವಂತರಾಗಿದ್ದಾರೆ. ಹಣ ಕೊಟ್ಟು ಬರುವುದು ಮತ್ತು ಹಣ ಮಾಡುವುದು ದಂದೆಯಾಗಿದೆ. ಹಣ ಇಲ್ಲದೆ ಏನೂ ನಡೆಯುವುದಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಒಂದು ಖಾತೆ ಮಾಡಬೇಕಾದರೆ, ಸರ್ಟಿಫಿಕೇಟ್ ಪಡೆಯಬೇಕಾದೆ, ಒಂದು ಮನೆ ಮಾಡಬೇಕೆಂದರೆ, ಯಾವುದೇ ಒಂದು ಸೌಲತ್ತು ಪಡೆಯಬೇಕಾದರೆ ಪಿಡಿಒಗಳಿಂದ ಪ್ರಾರಂಭವಾಗಿರುವ ಭ್ರಷ್ಠಾಚಾರ ತಾಲ್ಲೂಕು ದಂಡಾಧಿಕಾರಿಗಳ ವರೆವಿಗೂ ಸಾಗಿದೆ ಎಂಬದು ಜನಸಾಮಾನ್ಯರಲ್ಲಿ ದೊಡ್ಡ ಕೂಗು ಇದೆ. ಭ್ರಷ್ಟಾಚಾರ ದೊಡ್ಡ ಸಮಸ್ಯೆಯಾಗಿದೆ ದೊಡ್ಡ ಪಿಡುಗಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧೀನದಲ್ಲಿ ನಡೆಯುವ ಇಲಾಖೆಗಳು, ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ನಡೆಯುವ ಎಲ್ಲಾ ಇಲಾಖೆಗಳಲ್ಲಿ ಇಂದು ಭ್ರಷ್ಟಾಚಾರ ತಂಬಿ ತುಳುಕುತ್ತಿವೆ. ಸಾವಿರಾರು ಜನ ತಮ್ಮ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಲಂಚನೀಡದೆ 1, 2, 3 ವರ್ಷಗಳಾದರೂ ಕೆಲಸಗಳನ್ನು ಮಾಡುವುದಿಲ್ಲ. ಲಂಚಕ್ಕೆ ಮಿತಿಇಲ್ಲ, ಭ್ರಷ್ಟಾಚಾರಕ್ಕೆ ಮಿತಿಇಲ್ಲ. ದೌರ್ಜನ್ಯ, ದಬ್ಬಾಳಿಕೆಗೆ ಮಿತಿ ಇಲ್ಲ, ನಮ್ಮ ವೇದಿಕೆಯ ಉದ್ದೇಶ ನೊಂದವರು, ಸಂತ್ರಸ್ಥರು, ಅಬಲೆಯರು, ಕಾರ್ಮಿಕರು, ನೌಕರರು, ಕಾರ್ಮಿಕರು, ಅಲ್ಪಸಂಖ್ಯಾತರು, ಧ್ವನಿ ಇಲ್ಲದವರಿಗೆ ಪ್ರಾಮಾಣಿಕ, ಸ್ವಾಭಿಮಾನದ ಧ್ವನಿಯಾಗುವುದು ಎಂದರು.

ಯಾವುದೇ ಸರ್ಕಾರದ ಕಚೇರಿಯಾಗಬಹುದು, ಸಾರ್ವಜನಿಕ ವ್ಯೆವಸ್ಥೆಯಾಗಬಹುದು ಆ ಮನುಷ್ಯನಿಗೆ ಏನು ಸಿಗಬೇಕೋ ಅದು ಸಿಗದೆ ಇದ್ದಾಗ ನಾವು ಧ್ವನಿಯಾಗುತ್ತೇವೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪ, ಚರಂಡಿ, ರೇಷನ್, ಪಿಂಚಿಣಿ ವ್ಯೆವಸ್ಥೆ, ವಿದ್ಯಾರ್ಥಿ ವೇತನ, ಸಾರ್ವಜನಿಕ ಸಾಮಾಜಿಕ ಸಮಾನತೆ ವ್ಯವಸ್ಥೆಗೆ ಧಕ್ಕೆ ಬಂದಾಗ, ಸರಿಪಡಿಸುವ ಕೆಲಸ ಮಾಡುತ್ತೇವೆ. ಎಲ್ಲರೂ ಸಮಾನವಾಗಿ ನೆಮ್ಮದಿಯಿಂದ ಭ್ರಷ್ಟಾಚಾರ ಇಲ್ಲದೆ ಬದಕುವ ವ್ಯೆವಸ್ಥೆ ಕಲ್ಪಿಸುವುದೇ ನಮ್ಮ ಉದ್ದೇಶ ಎಂದರು.

ತಾಲ್ಲೂಕಿನಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ತಾಲ್ಲೂಕಿನಲ್ಲಿ ವಾಸವಿರಲೇಬೇಕು ಎಂದು ಖಡ್ಡಾಯ ಮಾಡುವುದು ವೇದಿಕೆಯ ಪ್ರಮುಖ ಅಜೆಂಡಾ ಇದೆ ಎಂದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್.ರಹಮತ್ತುಲ್ಲಾ ಮಾತನಾಡಿ, ತಾಲ್ಲೂಕಿನಲ್ಲಿ ಹೋರಾಟಗಳು ಮೂಲೆ ಗುಂಪಾಗಿದೆ. ನಮ್ಮ ಉದ್ದೇಶ ಉದ್ಯೋಗ, ಆರೋಗ್ಯ, ವಸತಿ, ಈ ವಿಚಾರಗಳ ಬಗ್ಗೆ ಹೋರಾಟಗಳನ್ನು ರೂಪಿಸಲು ಸಂಘಟನೆ ಮಾಡುವುದಾಗಿದೆ. ಕೂಲಿಕಾರ್ಮಿಕರಿಗೆ, ನಿವೇಶನ ಮನೆ ರಹಿತರಿಗೆ ವಸತಿ ಸೌಲಭ್ಯ ಅಗಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕಾದರೆ ತಾಲ್ಲೂಕಿನಲ್ಲಿ ಕಾರ್ಖಾನೆಗಳನ್ನು ತರಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಕೈಗಾರಿಕಾ ಪ್ರದೇಶಗಳನ್ನು ತೆರೆದಿದ್ದು ತಾಲ್ಲೂಕಿನಲ್ಲೂ ಕೈಗಾರಿಕಾ ಪ್ರದೇಶ ಘೋಷಣೆ ಮಾಡಬೇಕು ಎಂದು ಹೋರಾಟ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು, ಬಡವರಿಗೆ ಆರೋಗ್ಯ ಸಿಗಬೇಕು ನಾಲ್ಕು ಅಂಶಗಳ ಬಗ್ಗೆ ಧ್ವನಿ ಎತ್ತುತ್ತೇವೆ. ಸರ್ಕಾರ ಆಗಲಿ ಜನಪ್ರತಿನಿಧಿಗಳನ್ನಾಗಲಿ ಎಚ್ಚರಿಸುವ ಕೆಲಸ ಮಾಡೋಣ ಎಂದು ಸಂಘಟನೆ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸಂಘಟನೆ ಗೌರವಾದ್ಯಕ್ಷ ಕದಿರಿ ಡಿ.ಆರ್.ಯೂಸುಫ್, ಅಧ್ಯಕ್ಷ ಮಳ್ಳೂರು ಶಿವಣ್ಣ, ಉಪಾದ್ಯಕ್ಷ ಪ್ರಭಾಕರ್, ಮುಸ್ಟಾಕ್ ಅಹ್ಮದ್, ಕಾಯಾಧ್ಯಕ್ಷ ಮಧುಲತಾ, ಪ್ರಧಾನ ಕಾರ್ಯದರ್ಶಿ ಎಸ್.ರಹಮತ್ ಉಲ್ಲಾ, ಕಾರ್ಯದರ್ಶಿ ಎಸ್.ಎಂ.ರವಿಪ್ರಕಾಶ್ ಶೆಟ್ಟಿಹಳ್ಳಿ, ಖಜಾಂಚಿ ಎಂ.ಗೋವಿಂದರಾಜು ಅಪ್ಪೇಗೌಡನಹಳ್ಳಿ, ಸಂಘಟನಾ ಕಾರ್ಯದರ್ಶಿ ವಿಸ್ಡಂ ನಾಗರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ.ಕೃಷ್ಣಪ್ಪ, ಕೆ.ವಿ.ಕೃಷ್ಣಪ್ಪ, ಗೋಪಾಲರೆಡ್ಡಿ, ನಾಗರಾಜು, ಭಕ್ತರಹಳ್ಳಿ ಲಕ್ಷ್ಮೀನಾರಾಯಣರೆಡ್ಡಿ, ಬಚ್ಚರೆಡ್ಡಿ ತುಮ್ಮನಹಳ್ಳಿ, ಶಂಕರಪ್ಪ ಶಿಡ್ಲಘಟ್ಟ, ರಾಮೂ ನಲ್ಲಿಮರದಹಳ್ಳಿ, ಬಸವರಾಜು ಶಿಡ್ಲಘಟ್ಟ, ಚಲಪತಿ ತಾತಪರ್ತಿ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!