Home News ಬೈಕ್ ಕಳ್ಳರ ಬಂಧನ

ಬೈಕ್ ಕಳ್ಳರ ಬಂಧನ

0

ಮನೆಯ ಮುಂಭಾಗ ನಿಲ್ಲಿದಿದ್ದ ದ್ವಿಚಕ್ರವಾಹನಗಳನ್ನು ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂದಿಸಿದ್ದು ಸುಮಾರು 4 ಲಕ್ಷ 70 ಸಾವಿರ ಬೆಲೆ ಬಾಳುವ ಎರಡು ಕೆಟಿಎಂ ಬೈಕ್ ಹಾಗೂ ಮೂರು ಆರ್ ಎಕ್ಸ್ ಬೈಕ್ ಒಳಗೊಂಡ ಐದು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ರೆಡ್ಡಿಹಳ್ಳಿ ಗ್ರಾಮದ ಕುಶಾಂತ್ ಹಾಗೂ ಚಿಕ್ಕಬಳ್ಳಾಪುರ ತಾಲ್ಲೂಕಿನ ನೆಲಮಾಕನಹಳ್ಳಿಯ ಸಾಗರ್ ಬಂಧಿತ ಆರೋಪಿಗಳು.

ನಗರದ ಜೌಗುಪೇಟೆಯ ನಿವಾಸಿ ಎಸ್.ರಾಕೇಶ್ ಎಂಬುವವರು ತಮ್ಮ ಮನೆಯ ಮುಂಭಾಗ ಬಿಟ್ಟಿದ್ದ ತಮ್ಮ ಕೆಟಿಎಂ ಬೈಕ್ ಕಳುವಾಗಿರುವ ಬಗ್ಗೆ ನಗರಠಾಣೆಯಲ್ಲಿ ನೀಡಿದ್ದ ದೂರಿನ ಹಿನ್ನಲೆಯಲ್ಲಿ ಶೋಧ ಕಾರ್ಯ ನಡೆಸಿದ ನಗರಠಾಣೆ ಪಿಎಸ್ಸೈ ಕೆ.ಸತೀಶ್ ನೇತೃತ್ವದ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಯಾದ ಬೆಂಗಳೂರಿನ ನಾಗರಬಾವಿಯ ಮದನ್ ತಲೆಮರೆಸಿಕೊಂಡಿದ್ದು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.