Sidlaghatta : ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ಅಪರಾಧರಹಿತ ಸಮಾಜವನ್ನು ನಿರ್ಮಿಸಲು ಪಣ ತೊಡಬೇಕು ಎಂದು ಶಿಡ್ಲಘಟ್ಟ ಗ್ರಾಮಾಂತರ ಠಾಣೆ PSI ಜಿ.ಕೆ.ಸುನಿಲ್‌ಕುಮಾರ್ ಕರೆ ನೀಡಿದರು.
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯಡಿ ತಾಲೂಕಿನ ಜಂಗಮಕೋಟೆಯ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಭೇಟಿಗೆ ಬಂದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತರಾಗಿರಬೇಕು ಹಾಗು ಅಂತಹ ಅಪರಾಧ ಕೃತ್ಯಗಳು ಕಂಡುಬಂದಲ್ಲಿ ಅಥವಾ ತಾವೇ ಸ್ವತಃ ಇಂತಹ ಅನುಭವಕ್ಕೆ ಒಳಗಾದಲ್ಲಿ ಕೂಡಲೇ ೧೧೨ ನಂಬರ್ ಗೆ ಕಾಲ್ ಮಾಡುವ ಮೂಲಕ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ಗ್ರಾಮಾಂತರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ, ಜಂಗಮಕೋಟೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಉಜ್ರೇಕರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಪ್ರಕಾಶ್, ಶಿಕ್ಷಕಿಯರಾದ ನಾಗರತ್ನ, ಲತಾ, ಮೇಘಜೋಶಿ ಮತ್ತಿತರರು ಹಾಜರಿದ್ದರು.