Sidlaghatta : ಕರ್ನಾಟಕ ರಾಜ್ಯದಾದ್ಯಂತ ಇರುವ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಬಲಸಂವರ್ಧನೆ ಹಿನ್ನೆಲೆಯಲ್ಲಿ ಐದನೇ ರಾಜ್ಯ ಮಟ್ಟದ ಜಾಗೃತಿ ಸಮಾವೇಶವನ್ನು ಬೆಂಗಳೂರಿನ ವಸಂತನಗರದಲ್ಲಿ ಹಮ್ಮಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಸಮಾವೇಶಕ್ಕೆ ತಾಲ್ಲೂಕಿನ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಸದಸ್ಯರು ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ತಾಲ್ಲೂಕು ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಎಸ್.ಎ. ನರಸಿಂಹರಾಜು, ಸಮಿತಿಯ ಹಿರಿಯ ಮಾರ್ಗದರ್ಶಕ ಎಂ.ಸೀನಪ್ಪ, ವೆಂಕಟನರಸಪ್ಪ, ಸುಶೀಲಮ್ಮ, ಅಶ್ವತ್ಥಪ್ಪ, ಟಿ.ಟಿ.ನರಸಿಂಹಪ್ಪ, ಮುನಿರಾಜಪ್ಪ, ಗಣೇಶ್ ಬಾಬು, ಗೋವಿಂದ, ಅಶ್ವಥ್, ಪರಮೇಶ್, ರೆಡ್ಡಪ್ಪ, ಎಂ. ವೆಂಕಟೇಶಪ್ಪ ಹಾಜರಿದ್ದರು.