News

ಸಂಕ್ರಾಂತಿ ಸಂಭ್ರಮದ ಪ್ರಯುಕ್ತ ಶಾಲೆಯಲ್ಲಿ ಸುಗ್ಗಿ ಸಂಭ್ರಮ

Sankranti Celebration Garudadri School Sidlaghatta

ಸಂಕ್ರಾಂತಿ ಹಬ್ಬದ ಮುನ್ನಾ ದಿನ ಬುಧವಾರ ನಗರದ ಶ್ರೀ ಗರುಡಾದ್ರಿ ಇಂಗ್ಲಿಷ್ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ (ಸುಗ್ಗಿ ಹಬ್ಬ) ಗೋ ಪೂಜೆ, ರಂಗೋಲಿ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಭತ್ತ, ರಾಗಿ, ಧಾನ್ಯಗಳ ರಾಶಿ ಪೂಜೆಯೊಡನೆ ಆರಂಭಗೊಂಡು ಗೋ ಪೂಜೆ ನೆರವೇರಿಸುವ ಮೂಲಕ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಸಂಕ್ರಾಂತಿ ಹಬ್ಬದ ಸಂಸ್ಕೃತಿ ಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ವಿದ್ಯಾರ್ಥಿಗಳು ಹಾಗೂ ಶಿಕ್ಷ ಕ ವೃಂದ ದೇಶಿಯ ಉಡುಗೆ, ತೊಡುಗೆ ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅತಿಥಿಗಳ ಗಮನಸೆಳೆದರಲ್ಲದೇ ಅಪ್ಪಟ ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಪರಸ್ಪರ ಎಳ್ಳು, ಬೆಲ್ಲ ವಿನಿಮಯದೊಟ್ಟಿಗೆ ಸುಗ್ಗಿಹಬ್ಬ ಸಂಕ್ರಾಂತಿಯನ್ನು ಬರಮಾಡಿಕೊಂಡರು.

 ಶಾಲೆಯಲ್ಲಿ ಬೇಯಿಸಿದ ಗೆಣಸು, ಕಡಲೆಕಾಯಿ ಮತ್ತು ಅವರೆಕಾಯಿ ಹಾಗೂ ಪೊಂಗಲ್ ಮಾಡಿಸಿದ್ದು, ಮಕ್ಕಳು, ಪೋಷಕರು, ಶಿಕ್ಷಕರು ಸವಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಶ್ರೀನಿವಾಸಮೂರ್ತಿ ಮತ್ತು ಯೋಗ ಶಿಕ್ಷಕ ಶ್ರೀಕಾಂತ್, ವಿದ್ಯಾರ್ಥಿಗಳು ಗ್ರಾಮೀಣ ಸೊಗಡನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ ಇಂತಹ ಹಬ್ಬ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಸಂಸ್ಕೃತಿಯ ಉಳಿವಿಗೆ ಮನವಿ ಮಾಡಿದರು.

ಪ್ರಾಂಶುಪಾಲ ಕೆ.ಪುರುಷೋತ್ತಮ, ಕಿರುತೆರೆನಟ ಮದನ್ ಗೌಡ, ಶಿಕ್ಷಕ ನಾಗರಾಜ್ ಹಾಜರಿದ್ದರು.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Sidlaghatta Garudadri English Public School Gate Muddy Road 06082026

News

ಕನಕನಗರ: ಗರುಡಾದ್ರಿ ಶಾಲೆ ಮುಂಭಾಗದ ರಸ್ತೆ ಕೆಸರುಮಯ, ಮಕ್ಕಳಿಗೆ ಗಾಯ – ಪೋಷಕರ ಆಕ್ರೋಶ

Sidlaghatta ಶಿಡ್ಲಘಟ್ಟ : ಶಿಡ್ಲಘಟ್ಟ ನಗರದ ಕನಕನಗರದಲ್ಲಿರುವ ಗರುಡಾದ್ರಿ ಇಂಗ್ಲಿಷ್ ಪಬ್ಲಿಕ್ ಶಾಲೆಯ ಮುಂಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನೂರಾರು ಮಕ್ಕಳು ಹಾಗೂ ಪೋಷಕರು…

Share
Garudadri School Environment Day awareness

News

ವೃಕ್ಷಗಳ ವೇಷದಲ್ಲಿ ಮಿಂಚಿದ ಪುಟ್ಟ ಮಕ್ಕಳು: ಗರುಡಾದ್ರಿ ಶಾಲೆಯಿಂದ ಪರಿಸರ ದಿನಾಚರಣೆ

Sidlaghatta : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಗರುಡಾದ್ರಿ ಇಂಗ್ಲಿಷ್ ಪಬ್ಲಿಕ್ ಸ್ಕೂಲ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ ಸಾರ್ವಜನಿಕರ…

Share
Devaramallur Sankranti Celebration

News

ದೇವರಮಳ್ಳೂರು ಗ್ರಾಮದಲ್ಲಿನ ವಿಶೇಷವಾಗಿ ಸುಗ್ಗಿಯ ಸಂಕ್ರಾಂತಿ ಆಚರಣೆ

https://youtu.be/ep7h4jyXpJE Devaramallur, Sidlaghatta : ದೇವರುಗಳ ತವರೂರು ಎಂದೇ ಐತಿಹಾಸಿಕವಾಗಿ ಪ್ರಸಿದ್ಧಿಯಾದ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ರೈತರು ಅತ್ಯಂತ ಸಡಗರ…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Sidlaghatta Taluk Level Science Exhibition

News

ತಾಲ್ಲೂಕು ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆ

Sidlaghatta, Chikkaballapur : ಬಾಲ್ಯದಿಂದಲೇ ಪ್ರಶ್ನಿಸುವ, ಆಲೋಚಿಸುವ, ತಿಳಿದುಕೊಳ್ಳಲು ಪ್ರಯತ್ನಿಸುವ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ…

Share
Share
error: Content is protected !!