Saddahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ಹಿಪ್ಪುನೇರಳೆ (Mulberry) ಸೊಪ್ಪಿನ ತೋಟಕ್ಕೆ ಔಷಧಿ ಸಿಂಪಡಿಸಿದ್ದ ಪರಿಣಾಮ ರೇಷ್ಮೆ ಹುಳುಗಳು (Silk worms) ಬಹುತೇಕ ಸತ್ತಿವೆ. ಸದ್ದಹಳ್ಳಿಯ ಬಂಡೆಪ್ಪ ಎಂಬುವವರಿಗೆ ಸೇರಿರುವ ರೇಷ್ಮೆ ಹುಳುಗಳು ಸತ್ತಿರುವುದರಿಂದ ಕೈಗೆ ಬಂದಿದ್ದ ಬೆಳೆ ಪೂರ್ತಿ ನಷ್ಟವಾಗಿದೆ.
ಘಟನಾ ಸ್ಥಳಕ್ಕೆ ರೇಷ್ಮೆ ಇಲಾಖೆಯ ಅಧಿಕಾರಿ ಶಾಂತ ಅರಸು ಬೇಟಿ ನೀಡಿ ಪರಿಶೀಲನೆ ಮಾಡಿದರು. ತೋಟದ ಪಕ್ಕದ ಮನೆಯಲ್ಲಿ ಇರುವ ತಮ್ಮ ಸಂಬಂಧಿಕರೇ ಈ ಕೆಲಸ ಮಾಡಿರಬಹುದೆಂದು ಬಂಡೆಪ್ಪ ದಿಬೂರಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಲಿಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.