21.1 C
Sidlaghatta
Monday, December 23, 2024

ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯ

Farmers demand justice and action against Forest Department officials

- Advertisement -
- Advertisement -

Sidlaghatta : ಇರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡಿ ಜೀವನ ಕಟ್ಟಿಕೊಂಡಿರುವ ರೈತರ ಜಮೀನಿಗೆ ಯಾವುದೇ ನೋಟೀಸ್ ನೀಡದೇ ಏಕಾ ಏಕಿ ನುಗ್ಗಿ ಸಿಮೆಂಟ್ ಪಿಲ್ಲರ್ ಅಳವಡಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ರೈತರು ಒತ್ತಾಯಿಸಿದರು.

ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಸಾದಲಿ ಹೋಬಳಿಯ ಸುಮಾರು 16 ಹಳ್ಳಿಯ ರೈತರು ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ಅರಣ್ಯ ಇಲಾಖೆಯ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸ್ವಾಭಿಮಾನಿ ಸಮಾನ ಮನಸ್ಕರ ವೇಧಿಕೆಯ ಸಂಘಟನಾ ಕಾರ್ಯದರ್ಶಿ ವಿಸ್ಡಂ ನಾಗರಾಜ್ ಮಾತನಾಡಿ, ತಾಲ್ಲೂಕಿನ ಸಾದಲಿ ಹೋಬಳಿಯ ರಾಜ್ಯ ಮೀಸಲು ಅರಣ್ಯ ವ್ಯಾಪ್ತಿಯ ಸುಮಾರು 16 ಹಳ್ಳಿಗಳ ರೈತರು ಕಂದಾಯ ಇಲಾಖೆಯ ದಾಖಲೆಗಳೊಂದಿಗೆ ಸುಮಾರು 50 ವರ್ಷದಿಂದ ಸಾಗುವಳಿ ಮಾಡುತ್ತಾ ಬಂದಿದ್ದು ಇದೀಗ ಏಕಾ ಏಕಿ ಅರಣ್ಯ ಇಲಾಖೆಯವರು ಬಂದು ಈ ಜಮೀನು ನಮ್ಮ ಇಲಾಖೆಗೆ ಸೇರಿದ್ದು ಎಂದು ಹೇಳುವ ಮೂಲಕ ಮುಳ್ಳು ತಂತಿ ಅಳವಡಿಸಿ ಬಲವಂತವಾಗಿ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿದರೆ 1930 ರ ಸ್ವಾತಂತ್ರ್ಯ ಪೂರ್ವದ ನಕ್ಷೆಯೊಂದನ್ನು ತೋರಿಸಿ ಆ ನಕ್ಷೆಯಂತೆ ನಾವು ಜಮೀನನನ್ನು ವಶಪಡಿಸಿಕೊಳ್ಳುತ್ತಿದ್ದೇವೆ, ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ದ ದೂರು ದಾಖಲಿಸುವಾದಾಗಿ ಬೆದರಿಸುತ್ತಾರೆ. 1930 ರ ಸ್ವಾತಂತ್ರ್ಯ ಪೂರ್ವದ ನಕ್ಷೆಯನ್ವಯ ಕೆಲಸ ಮಾಡುವ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಕಂದಾಯ ಇಲಾಖೆಯವರು ನೀಡಿರುವ ದಾಖಲೆಗಳನ್ನು ಒಪ್ಪುವುದಿಲ್ಲವೇ? ನಾವಿನ್ನು ಬ್ರಿಟೀಷರ ಕಾಲದಲ್ಲಿಯೇ ಇದ್ದೇವೆಯೇ ಎನ್ನುವುದನ್ನು ತಾಲ್ಲೂಕು ದಂಡಾಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ ಎಂದು ಒತ್ತಾಯಿಸಿದರು.

ಕಂದಾಯ ಇಲಾಖೆಯ ದಾಖಲೆಗಳನ್ವಯ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಇದನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಭೂಮಿ ಉಳಿಸಿಕೊಡಲು ತಹಸೀಲ್ದಾರರು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಎಸ್.ಎಂ.ರವಿಪ್ರಕಾಶ್, ಗೋಪಾಲಪ್ಪ, ಆನಂದ್, ಶಂಕರಪ್ಪ, ಸದಾಶಿವ, ಮಂಜುನಾಥ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.


Farmers in Sadali Hobali Protest Against Forest Department’s Land Encroachment

Sidlaghatta : Farmers from 16 villages in Sadali Hobali, located within the state reserve forest of Sidlaghatta taluk, recently staged a protest in front of the taluk office. The farmers accused officials from the Forest Department of encroaching on their land and installing cement pillars without prior notice. The protest, led by various organizations, including the Swabhimani Samana Manaskar Vedhika, was aimed at demanding strict action against the Forest Department.

According to Wisdom Nagaraj, the organizing secretary of Swabhimani Samana Manaskar Vedhika, the farmers have been cultivating their land for over 50 years with the records of the revenue department. However, they are now being forced to give up their land. The Forest Department officials allegedly produced a pre-independence map from 1930 to prove that the land is not rightfully owned by the farmers. They even threatened to file complaints against anyone who disturbed them.

Nagaraj demanded that the taluk magistrates clarify whether the area is still in the British era, and disagreed with the Forest Department’s reliance on documents from pre-independence times. He submitted a request to Tehsildar B.N.Swami, urging him to intervene and provide justice for the farmers who have been cultivating the land based on the records of the Revenue Department. The farmers are calling for their land to be saved and for the Forest Department officials to stop encroaching on their livelihood.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!