ತಾಲ್ಲೂಕಿನ ವಿವಿಧ ಕೋವಿಡ್ ಕೇರ್ ಸೆಂಟರುಗಳಿಗೆ ಭೇಟಿ ನೀಡಿ ಸೋಂಕಿತರಿಗೆ ಮತ್ತು ಸಿಬ್ಬಂದಿಗಳಿಗಾಗಿ 500 ಕ್ಕೂ ಹೆಚ್ಚು ಹಣ್ಣು ಮತ್ತು ಆಹಾರದ ಸಾಮಗ್ರಿಯಿರುವ ಕಿಟ್ ಗಳನ್ನು ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ವಿತರಿಸಿ ಅವರು ಮಾತನಾಡಿದರು.
ಸೋಂಕಿತರು ಯಾವುದೇ ಕಾರಣಕ್ಕೂ ಭಯ ಬೀಳಬಾರದು. ನಾವು ಭಯಪಟ್ಟರೆ ನಮ್ಮನ್ನು ಭಯ ಬೀಳಿಸುವಂಥ ಕಾಯಿಲೆಯಿದು. ಭಯವನ್ನು ಬಿಟ್ಟು ಧೈರ್ಯದಿಂದ ಇರಿ. ನನಗೂ ಕೂಡ ಎರಡು ಬಾರಿ ಕೊರೊನಾ ಪಾಸಿಟಿವ್ ಆಗಿತ್ತು. ಆದರೂ ಕೂಡ ನಾನು ಭಯವನ್ನು ಬಿಟ್ಟೆ ಬೇಗ ಗುಣಮುಖರಾದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಸ್.ಎನ್.ಕ್ರಿಯಾ ಟಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ನಾನು ಸುಮಾರು 8 ವರ್ಷಗಳಿಂದ ಕೈಲಾದಮಟ್ಟಿಗೆ ತಾಲ್ಲೂಕಿನ ಜನರಿಗೆ ಸಹಾಯ ಮಾಡುತ್ತಾ ಬಂದಿದ್ದೇನೆ. ಕೊರೊನಾ ಸಂದರ್ಭದಲ್ಲಿ ಕಳೆದ ವರ್ಷ ಮತ್ತು ಈ ವರ್ಷವೂ ತೊಂದರೆಗೊಳಗಾದವರಿಗೆ ನೆರವಾಗುತ್ತಿದ್ದೇನೆ. ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಮತ್ತು ಔಷಧಿಗಳನ್ನು ನೀಡಿದ್ದು, ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಕ್ರಿಮಿನಾಶಕ ಸಿಂಪಡಣೆ ಮಾಡಿಸುತ್ತಿರುವುದಾಗಿ ಹೇಳಿದರು.
ಡಾ.ಅವಿನಾಶ್, ಮುಖ್ಯಶಿಕ್ಷಕ ಚಂದ್ರಪ್ಪ, ಕೃಷ್ಣಮೂರ್ತಿ, ಮುನಿಲಕ್ಷಮ್ಮ, ಆನೂರು ದೇವರಾಜು, ಕೆಪಿಸಿಸಿ ಸದಸ್ಯ ನಾರಾಯಣಸ್ವಾಮಿ ಬಂಗಾರಪ್ಪ, ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶ್ವತನಾರಾಯಣರೆಡ್ಡಿ, ಆನಂದ್, ಮದನ್, ಬಾಬು ಹುಸೇನ್, ನಾರಾಯಣಸ್ವಾಮಿ, ದಡಂಘಟ್ಟ ಕೃಷ್ಣಪ್ಪ, ಮಾರಪ್ಪ, ಗೌಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಹಾಜರಿದ್ದರು.