News

ಸರ್ಕಾರದ ನೆರವು ಕೋರಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರ ಮನವಿ

Rajya Raita sangha Haisru sene Sidlaghatta Farmers Protest government Karnataka

ಕೊರೊನಾ ಎರಡನೇ ಅಲೆಯಿಂದಾಗಿ ಇಡೀ ದೇಶವೇ ತತ್ತರಿಸುತ್ತಿದೆ. ಇದನ್ನು ತಡೆಯಲೆಂದು ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ರೈತರು ಬೆಳೆದಿರುವ ಹೂ, ಹಣ್ಣು, ತರಕಾರಿ, ರೇಷ್ಮೆ ಹಾಗೂ ಹೈನುಗಾರಿಕೆ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಲೆಗಳು ಕುಸಿದಿವೆ. ಇದರ ಜೊತೆಗೆ ರಾಸಾಯನಿಕ ಗೊಬ್ಬರಗಳ ಹಾಗೂ ಕೀಟನಾಶಕಗಳ ಬೆಲೆ 50% ಏರಿಕೆಯಾಗಿವೆ. ರೈತರು ತಮ್ಮ ಬೆಳೆಗಳನ್ನು ಯಾರೂ ಕೇಳುವವರಿಲ್ಲದೆ, ಹಾಕಿದ ಬಂಡವಾಳ ಕೈಗೆ ಸಿಗದೆ, ಕೊಯ್ಲು ಮಾಡುವ ಕೂಲಿ ಸಹ ಸಿಗದೆ ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು. ರೈತರಿಗೆ ನಷ್ಠ ಪರಿಹಾರವನ್ನು ಒದಗಿಸಬೇಕು. ಆಮ್ಲಜನಕದ ಕೊರತೆಯಿಂದ ಮೃತಪಟ್ಟವರ ಕುಟುಂಬದವರಿಗೆ 20 ಲಕ್ಷ ರೂ ಪರಿಹಾರ ನೀಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಒತ್ತಾಯಿಸಿದರು.

ಕೊರೊನಾ ಹಾವಳಿ ಹಾಗೂ ಲಾಕ ಡೌನ್ ನಿಂದಾಗಿ ರೈತರಿಗೆ ಆಗಿರುವ ತೊಂದರೆಗಳಿಗೆ ಸರ್ಕಾರ ಮಧ್ಯ ಪ್ರವೇಶಿಸಿ ನೆರವು ನೀಡಬೇಕೆಂದು ಬುಧವಾರ ತಹಶೀಲ್ದಾರ್‍ ರಾಜೀವ್ ಅವರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು.

 ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ವೇಣುಗೋಪಾಲ್, ರಾಮಚಂದ್ರಪ್ಪ, ದೇವರಾಜ್, ಕೆಂಪಣ್ಣ, ಸುರೇಶ್ ಕುಮಾರ್‍ ಹಾಜರಿದ್ದರು.

Follow ನಮ್ಮ ಶಿಡ್ಲಘಟ್ಟ on

Facebook: https://www.facebook.com/sidlaghatta

Twitter: https://twitter.com/hisidlaghatta

Instagram: https://www.instagram.com/sidlaghatta

Telegram: https://t.me/Sidlaghatta

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Sidlaghatta Farmers karnataka rajya raita sangha Protest

News

ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ, BESCOM ಭ್ರಷ್ಟಾಚಾರದ ವಿರುದ್ಧ ರೈತ ಸಂಘದ ಪ್ರತಿಭಟನೆ

Sidlaghatta : ಏರುತ್ತಿರುವ ರಸಗೊಬ್ಬರ ಬೆಲೆ, ಸಮರ್ಪಕ ಪೂರೈಕೆಯ ಕೊರತೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯವನ್ನು ಖಂಡಿಸಿ ಸೋಮವಾರ ನಗರದ ತಾಲ್ಲೂಕು ಕಚೇರಿ…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Sidlaghatta Karnataka Rajya Raita sangha Hasiru sene

News

ರೈತರ ಪ್ರತಿನಿಧಿಗಳಾಗಿ ರೈತರನ್ನು ವಿಧಾನಸೌಧಕ್ಕೆ ಕಳುಹಿಸಲು ತೀರ್ಮಾನ

Sidlaghatta : ರೈತರಿಂದ ಮತ ಪಡೆದು ವಿಧಾನಸಭೆಗೆ ಹೋಗಿರುವ ಜನಪ್ರತಿನಿಧಿಗಳು, ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ವಚನ ಭ್ರಷ್ಟರಾಗಿರುವ ಕಾರಣ, ಮುಂದಿನ ಗ್ರಾ.ಪಂ, ತಾ.ಪಂ, ಜಿ.ಪಂ…

Share
Share
error: Content is protected !!