ಮಳೆಗೆ ಕೆಸರುಮಯವಾದ ರಸ್ತೆಗಳು: ಸಂಚಾರಕ್ಕೆ ತೊಂದರೆ, ದುರಸ್ತಿಗೆ ನಿವಾಸಿಗಳ ಆಗ್ರಹ

ಮಳೆಗೆ ಕೆಸರುಮಯವಾದ ರಸ್ತೆಗಳು: ಸಂಚಾರಕ್ಕೆ ತೊಂದರೆ, ದುರಸ್ತಿಗೆ ನಿವಾಸಿಗಳ ಆಗ್ರಹ

Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಕಳೆದ ಹಲವು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಒಂದೆಡೆ ಮಳೆ ಸಂತಸ ತಂದಿದ್ದರೆ, ಮತ್ತೊಂದೆಡೆ ಹದಗೆಟ್ಟ ರಸ್ತೆಗಳು ಜನರ ಸಂಕಷ್ಟವನ್ನು ಹೆಚ್ಚಿಸಿವೆ. ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯ 27ನೇ ವಾರ್ಡ್‌ನ ರಾಜೀವ್ ಗಾಂಧಿ ಬಡಾವಣೆಯಲ್ಲಿ ಮಳೆಯಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಂತಾಗಿವೆ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕೆಸರಿನಲ್ಲಿ ಜಾರಿ ಬೀಳುವ ಆತಂಕ

ಮಳೆ ಸುರಿದಾಗ ರಸ್ತೆಗಳ ಮೇಲೆ ಕೆಸರು ತುಂಬಿಕೊಳ್ಳುವುದರಿಂದ ನಡೆದುಕೊಂಡು ಹೋಗುವುದೂ ಕಷ್ಟವಾಗಿದೆ. ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಕೆಸರಿನಲ್ಲಿ ಜಾರಿ ಬೀಳುವ ಆತಂಕ ಎದುರಾಗಿದೆ. ಈಗಾಗಲೇ ಕೆಲ ಬೈಕ್ ಸವಾರರು ಕೆಸರಿನಲ್ಲಿ ಸಿಲುಕಿ ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಗರದ ಇತರೆಡೆಯೂ ಅಗೆದ ರಸ್ತೆಗಳು ಮಳೆಗೆ ಕೆಸರಾಗಿ ನಿವಾಸಿಗಳು ತೊಂದರೆ ಅನುಭವಿಸಿದ್ದನ್ನು ಈ ಹಿಂದೆ ವರದಿ ಮಾಡಲಾಗಿತ್ತು; ಕೆಸರು ರಸ್ತೆಯಲ್ಲಿ ಮಕ್ಕಳು ಗಾಯಗೊಂಡ ಘಟನೆಯೂ ವರದಿಯಾಗಿತ್ತು.

Vehicle driving through a muddy, puddled road in a residential layout after rain

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಬಡಾವಣೆಯ ರಸ್ತೆ ಸಮಸ್ಯೆಯ ಬಗ್ಗೆ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ಮಳೆ ಬಂದಾಗಲೆಲ್ಲ ಇದೇ ಸಮಸ್ಯೆ ಮರುಕಳಿಸುತ್ತಿದ್ದು, ಜನರ ಸಂಕಷ್ಟಕ್ಕೆ ಪರಿಹಾರ ಸಿಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆಗಳ ದುಸ್ಥಿತಿಯಿಂದಾಗಿ ದಿನನಿತ್ಯದ ಓಡಾಟಕ್ಕೂ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು, ಮಳೆಗಾಲದಲ್ಲಿ ಜನರು ಸುರಕ್ಷಿತವಾಗಿ ಸಂಚರಿಸಲು ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿ ಮನೋಹರ ಒತ್ತಾಯಿಸಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

More

Share
error: Content is protected !!