26.1 C
Sidlaghatta
Monday, December 23, 2024

ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ

- Advertisement -
- Advertisement -

Sidlaghatta : ಕನ್ನಡ ಚಿತ್ರರಂಗದ ಖ್ಯಾತ ನಟ, ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಶುಕ್ರವಾರ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು.

ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರ ಬೃಹತ್ ಫ್ಲೆಕ್ಸ್ ಹಾಕಿ ಅದಕ್ಕೆ ಹೂಮಾಲೆ ಹಾಕಿ, ಅನ್ನಸಂತರ್ಪಣೆ ಮಾಡಿ ನೆಚ್ಚಿನ ನಟನನ್ನು ಸ್ಮರಿಸಿದರು.
ನಗರದ ಉಲ್ಲೂರುಪೇಟೆ ಬಳಿಯ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ಸ್ನೇಹ ಯುವಕರ ಸಂಘದ ವತಿಯಿಂದ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಹಾರ ಹಾಕಿ, ಪೂಜೆ ಸಲ್ಲಿಸಿದರು. ಸಂಘದ ವತಿಯಿಂದ ಅನ್ನಸಂತರ್ಪಣೆ ಮಾಡುವ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಯಿತು.

ಸ್ನೇಹ ಯುವಕರ ಸಂಘದ ಅಧ್ಯಕ್ಷ ಭರತ್ ಮಾತನಾಡಿ, “ಕನ್ನಡ ಸಿನಿಮಾರಂಗದ ಮೇರು ಪ್ರತಿಭೆ ಅಪ್ಪು ಅವರ ಸಮಾಜ ಮುಖಿ ಚಿಂತನೆ ಎಲ್ಲರಿಗೂ ಮಾದರಿ ಯಾಗಿದೆ. ಅಪ್ಪು ಅವರ ನೆನಪಿನಲ್ಲಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಜೆಗೆ ಆಯೋಜಿಸಿದ್ದೇವೆ” ಎಂದರು.

ಸ್ನೇಹ ಯುವಕರ ಸಂಘದ ಅಧ್ಯಕ್ಷ ಭರತ್, ರಾಜು, ಮಹೇಶ್, ಶೇಖರ್, ಶ್ರೀನಿವಾಸ್, ನವೀನ್, ಸುನಿಲ್, ಮಂಜುನಾಥ್, ಗಿರಿಧರ್, ಮುನಿರಾಜು, ಟಿಪ್ಪು ಮೌಲಾ, ರಾಮಾಂಜಿ, ನರೇಶ್, ವೇಣು ಹಾಜರಿದ್ದರು


Puneeth Rajkumar’s Birthday Celebrations in Sidlaghatta Taluk

Sidlaghatta : The birthday of renowned Kannada film industry actor and Karnataka Ratna awardee, Dr. Puneeth Rajkumar, was celebrated with great fervor across Sidlaghatta taluk and the city on Friday.

In several villages of Shidlaghatta taluk, a large flex banner of Puneeth Rajkumar was displayed, adorned with garlands, and food offerings were made in honor of the beloved actor.

At the Puneeth Rajkumar Circle near Ullurpet in the city, members of the Sneha Youth Association paid homage to the actor by offering food and garlanding his idol. The association also organized a cultural program in the evening to showcase the talents of local children in memory of the iconic actor.

Bharat, the president of the Sneha Youth Association, spoke about Puneeth Rajkumar’s contributions to the Kannada film industry and emphasized the actor’s role as a positive role model for all. The event was attended by several members of the association including Raju, Mahesh, Shekhar, Srinivas, Naveen, Sunil, Manjunath, Giridhar, Muniraju, Tippu Maula, Ramanji, Naresh, and Venu.

The celebration of Puneeth Rajkumar’s birthday reflects the enduring love and respect that the people of Karnataka hold for the talented actor, who has made a significant impact on the state’s film industry over the years.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!