ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ವಿಶ್ವ ಜನಸಂಖ್ಯಾ ದಿನಾಚರಣೆಯ ಪೂರ್ವಭಾವಿಯಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದ ಭಾಗವಾಗಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಜನಸಂಖ್ಯಾ ಸ್ಫೋಟದಿಂದ ಆಹಾರ, ನೀರು, ಬಟ್ಟೆ, ವಸತಿ ಕೊರತೆ ಉಂಟಾಗುವುದರ ಜೊತೆಗೆ ಶಿಕ್ಷಣ, ಆರೋಗ್ಯ ಸೇವೆಗಳು ಇತರೆ ಸಂಪನ್ಮೂಲ ಕೊರತೆಯು ಉಂಟಾಗುತ್ತದೆ. ವಾಯು, ಜಲ ಮತ್ತು ಶಬ್ದ ಮಾಲಿನ್ಯ ಹೆಚ್ಚಾಗುವುದರ ಜೊತೆಗೆ ಸಾಮಾಜಿಕ ಅಸಮಾನತೆ ತಲೆದೋರುತ್ತದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕುಟುಂಬ ನಿಯಂತ್ರಣದ ಸರಳ ಶಸ್ತ್ರಚಿಕಿತ್ಸೆ ಗೆ ಪ್ರೋತ್ಸಾಹ ಧನವಿದೆ. ಪುರುಷರಿಗೆ 1100 ರೂಗಳು, ಮಹಿಳೆಯರಿಗೆ 650 ರೂ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಜಾಗತಿಕವಾಗಿ ಏರುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ತೊಂದರೆ, ಸಮಸ್ಯೆ ಮತ್ತು ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರಚಾರ ವಾಹನವನ್ನು ತಾಲ್ಲೂಕಿನಾದ್ಯಂತ ಕಳುಹಿಸಲಾಗುತ್ತಿದೆ. ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದ್ದು, ಪ್ರಚಾರ ವಾಹನವನ್ನು ನಗರ ಸೇರಿದಂತೆ ಬಶೆಟ್ಟಹಳ್ಳಿ, ಜಂಗಮಕೋಟೆ, ಕೆ.ಮುತ್ತುಗದಹಳ್ಳಿ, ಮೇಲೂರು ಮುಂತಾದೆಡೆ ಸಂಚರಿಸಲಿದೆ ಎಂದು ಹೇಳಿದರು.
ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗುರು, ತಾಲ್ಲೂಕು ಆರೋಗ್ಯ ನಿರೀಕ್ಷಣ ಅಧಿಕಾರಿ ಎಂ.ಎಸ್.ದೇವರಾಜ್, ಹಿರಿಯ ಪ್ರಾಥಮಿಕ ಸುರಕ್ಷತಾಧಿಕಾರಿ ಮುನಿರತ್ನಮ್ಮ. ನಗರಸಭೆ ಆರೋಗ್ಯ ನಿರೀಕ್ಷಕಿ ಶೋಭಾ, ನಗರ ಆರೋಗ್ಯ ಕೇಂದ್ರ ವಿಜಯಲಕ್ಷ್ಮಿ, ಧನಂಜಯ, ಸಾರ್ವಜನಿಕ ಆಸ್ಪತ್ರೆಯ ಡಾ.ಸೋನಾಲಿ, ಡಾ.ಪವಿತ್ರ, ಡಾ.ಅಭಿರಾಮ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಗೀತಾ, ಚೈತ್ರ, ನಂದಿನಿ, ಅಫ್ರೋಜ, ಸರೋಜಾ, ಮಂಜು, ಇದಾಯತ್, ಆಶಾ ಕಾರ್ಯಕರ್ತೆಯರು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi