ನಗರದ ಪೊಲೀಸ್ ಠಾಣೆಯಲ್ಲಿ ಔಷಧಿ ವ್ಯಾಪಾರಿಗಳು, ಸ್ಟೇಷನರಿ ಅಂಗಡಿ ಮಾಲೀಕರು ಹಾಗೂ ಪಂಚರ್ ಶಾಪ್ ಮಾಲೀಕರ ಸಭೆಯಲ್ಲಿ ಪಿ.ಎಸ್.ಐ ಸತೀಶ್ ಮಾತನಾಡಿ ಪೆಟ್ರೋಲ್, ಈಥರ್, ಕ್ಲೋರೊಫಾರಂ, ನೈಟ್ರಿಕ್ ಆಕ್ಸೈಡ್, ಪೈಂಟ್ ಥಿನ್ನರ್, ವೈಟ್‍ನರ್, ಶುಚಿಗೊಳಿಸಲು ಬಳಸುವ ದ್ರವ ಮತ್ತು ಸಲ್ಯೂಷನ್ ಮೊದಲಾದ ವಸ್ತುಗಳನ್ನು ಎಳೆ ವಯಸ್ಸಿನವರಿಗೆ, ಯುವಕರಿಗೆ ಮಾರಬಾರದು ಎಂದು ತಿಳಿಸಿತು.
ಸಲ್ಯೂಷನ್ ದ್ರವವನ್ನು ಬಿಡಿಯಾಗಿ ಮಾರಾಟ ಮಾಡಬಾರದು ಮತ್ತು ವೈಟ್‍ನರ್ ಅನ್ನು ಪೆನ್ ರೂಪದಲ್ಲಿ ಮಾತ್ರ ಮಾತ್ರ ಮಾರಾಟ ಮಾಡಲು ಸೂಚನೆ ನೀಡಿದರು.
ಮನಸ್ಸನ್ನು ಪರಿವರ್ತಿಸುವ ಎಲ್ಲಾ ಮದ್ದುಗಳು ಚಟ ಹಿಡಿಸುತ್ತವೆ. ಮದ್ದನ್ನು ಪಡೆಯಲು ವ್ಯಸನಿ ಕಳ್ಳತನ, ದರೋಡೆ, ಖೂನಿ ಮತ್ತಿತರ ಹೇಯಕೃತ್ಯಗಳನ್ನು ಮಾಡಲೂ ಹೇಸುವುದಿಲ್ಲ. ಮಾದಕ ವ್ಯಸನಿದೈಹಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಅಧೋಗತಿ ತಲುಪಿ, ಎಲ್ಲವನ್ನೂ,ಎಲ್ಲರನ್ನೂ ಬಿಟ್ಟು ಮದ್ದಿನ ಲೋಕದ ಸೆರೆಯಾಳಾಗುತ್ತಾನೆ. ವ್ಯಸನಿಗಳನ್ನು ಗುರುತಿಸುವುದು ಸುಲಭ. ಈ ರೀತಿಯವರನ್ನು ಅಂಗಡಿ ಬಳಿಯೂ ಬಿಟ್ಟುಕೊಳ್ಳಬೇಡಿ. ಅಕಸ್ಮಾತ್ ಹಣದ ಆಸೆಯಿಂದ ಈ ರೀತಿಯ ವಸ್ತುಗಳನ್ನು ಮಾರಿದ್ದು ತಿಳಿದುಬಂದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ವಿ.ಎಸ್ ಗುಪ್ತ, ಮಂಜುನಾಥ್, ಸುರೇಶ್, ಸ್ಟೇಷನರಿ ಅಂಗಡಿ ಮಾಲೀಕರು ಹಾಗೂ ಪಂಚರ್ ಶಾಪ್ ಮಾಲೀಕರು ಹಾಜರಿದ್ದರು.