Home News ಮಾದಕ ವಸ್ತುಗಳ ವಿರುದ್ಧ ಅರಿವು ಮೂಡಿಸಿದ ಪೊಲೀಸರು

ಮಾದಕ ವಸ್ತುಗಳ ವಿರುದ್ಧ ಅರಿವು ಮೂಡಿಸಿದ ಪೊಲೀಸರು

0

ನಗರದ ಬಸ್ ನಿಲ್ದಾಣ ದಲ್ಲಿ ಮಂಗಳವಾರ ಮಾದಕ ವಸ್ತುಗಳ ವಿರುದ್ಧ ಜನರಿಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಮಾತನಾಡಿದರು.
ಸಮಾಜಕ್ಕೆ ಮಾರಕವಾದ ಮಾದಕ ವಸ್ತು ಮತ್ತು ಮಾನವ ಸಾಗಾಣಿಕೆ ಕುರಿತಂತೆ ಜಾಗೃತಿ ಮೂಡಿಸಿ ಸಮಾಜದಲ್ಲಿ ಅರಿವು ಮೂಡಿಸಲು ಪೊಲೀಸ್‌ ಇಲಾಖೆಯೊಂದಿಗೆ ಎಲ್ಲರು ಕೈಜೋಡಿಸಬೇಕು, ಮಾದಕ ವಸ್ತು ಸೇವನೆ, ಸಾಗಾಣಿಕೆ, ಮಾರಾಟದಂತಹ ಸಾಮಾಜಿಕ ಪಿಡುಗನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಎಂದರು.

 ಕೋವಿಡ್‌ ವೈರಸ್‌ ಅತ್ಯಂತ ಅಪಾಯಕಾರಿಯಾಗಿ ಹರಡುತ್ತಿದೆ. ಮುಂಜಾಗ್ರತಾ ಕ್ರಮಗಳಿಂದ ಮಾತ್ರ ಈ ವೈರಸ್‌ ನಿಯಂತ್ರಿಸಬಹುದು. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು. ಇಷ್ಟಾಗಿಯೂ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸಿ ಸಾರ್ವಜನಿಕವಾಗಿ ಓಡಾಟ ನಡೆಸುವುದು ಎಲ್ಲರ ಆರೋಗ್ಯದ ಕಾಳಜಿಯಿಂದ ಸರಿಯಲ್ಲ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಮನವಿ ಮಾಡಿಕೊಂಡರು.

 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೀಪ್‍ಗಳಲ್ಲಿ ನಗರ ಸಂಚಾರ ಕೈಗೊಂಡು ಯುವಜನರಿಗೆ ಮಾರಕವಾಗಿರುವ ಮಾದಕ ವಸ್ತುಗಳ ಸೇವನೆಯನ್ನು ಕೈಬಿಡಿ-ಮಾದಕ ವಸ್ತುಗಳ ಪತ್ತೆಗಾಗಿ ಪೊಲೀಸರೊಂದಿಗೆ ಕೈಜೋಡಿಸಿ ಎಂಬ ಘೋಷವಾಕ್ಯಗೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.

 ನಗರ ಠಾಣೆಯ ಪಿಎಸ್ಐ ಸಂಗಮೇಶ್ ಮೇಟಿ ಹಾಗೂ ಪೊಲೀಸ್ ಸಿಬ್ಬಂದಿ ನಗರಸಭೆ ಸದಸ್ಯರುಗಳು ಮತ್ತು ಆಟೋ ಚಾಲಕರು ಹಾಜರಿದ್ದರು.

error: Content is protected !!