ಪೊಲೀಸ್ ಇಲಾಖೆ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯಿಂದ ಸೋಮವಾರ ನಗರದಾದ್ಯಂತ ಕೊರೊನ ಜನ ಜಾಗೃತಿ ಅಭಿಯಾನ ನಡೆಸಲಾಯಿತು.
ನಗರಠಾಣೆ ಮುಂಬಾಗದಿಂದ ಮೆರವಣಿಯ ಮುಖಾಂತರ ಹೊರಟ ಪೊಲೀಸ್ ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಪಿಎಸ್ಸೈ ಸತೀಶ್ ಮಾತನಾಡಿ, ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಎಂದು ಜನರಿಗೆ ಮನವರಿಕೆ ಮಾಡಿದರು.
ಕೊರೊನಾ ಎರಡನೇ ಅಲೆ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು ಜನತೆ ಮತ್ತಷ್ಟು ಜಾಗೃತಿವಹಿಸಬೇಕು. ವಿನಾಕಾರಣ ರಸ್ತೆಯಲ್ಲಿ ಓಡಾಡುವುದು, ಗುಂಪು ಗುಂಪಾಗಿ ಸೇರುವುದನ್ನು ಬಿಟ್ಟು ಆದಷ್ಟು ಮನೆಯಲ್ಲಿಯೇ ಉಳಿದುಕೊಳ್ಳುವ ಮೂಲಕ ಸಹಕಾರ ನೀಡಬೇಕು ಎಂದರು.
ಗೃಹರಕ್ಷಕದಳದ ಘಟಕಾಧಿಕಾರಿ ನಾರಾಯಣಸ್ವಾಮಿ, ಪ್ರಭಾರಿ ಘಟಕಾಧಿಕಾರಿ ಆರ್.ರಾಜೇಂದ್ರಪ್ರಸಾದ್, ಗೃಹರಕ್ಷಕರಾದ ಎಂ.ಸೀನಪ್ಪ, ಮುರಳೀಧರ, ಎನ್.ದೇವರಾಜ, ಸಿ.ನಾಗೇಶ, ಆರ್.ರವಿ. ಎಂ.ಆರ್.ಗೀತಾ ಹಾಜರಿದ್ದರು.