Sidlaghatta : ಶಿಡ್ಲಘಟ್ಟ ನಗರದಲ್ಲಿ ಸೋಮವಾರ ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಸಬ್ ಇನ್ಸ್ ಪೆಕ್ಟರ್ ಪದ್ಮಾವತಮ್ಮ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಶಿಸ್ತು ಬೇಕಿದೆ. ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ಅಪಘಾತಗಳು ನಡೆಯುತ್ತಿದ್ದು ಇವುಗಳು ಕಡಿಮೆಯಾಗಬೇಕು ಎನ್ನುವ ಕಾರಣದಿಂದ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾನೂನುಗಳಿವೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು. ಸಮ್ಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
“ಸ್ಟೇರಿಂಗ್ ಒಂದು ಕೈಯಲ್ಲಿ. ಮೊಬೈಲ್ ಒಂದು ಕಿವಿಯಲ್ಲಿ ಅಪಘಾತ ತಂದಿತು ಕ್ಷಣದಲ್ಲಿ”, “ಅವಸರವೇ ಅಪಘಾತಕ್ಕೆ ಕಾರಣ”, “ಕುಡಿದು ವಾಹನ ಚಾಲನೆ ಮಾಡಬೇಡಿ”, “ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲೈಟ್ ಮತ್ತು ಸೀಟ್‌ಬೆಲ್ಟ್ ದರಿಸಿ”, “ರಸ್ತೆ ದಾಟುವಾಗ ಅಕ್ಕ-ಪಕ್ಕ ನೋಡಿ ಚಲಿಸಿ”, “ರಸ್ತೆಯಲ್ಲಿ ಚೆಲ್ಲಾಟ ಸಾವಿನೊಡನೆ ಸೆಣಸಾಟ”, “ರಸ್ತೆಯಲ್ಲಿ ಎಡ ಬದಿಯಲ್ಲೆ ಚಲಿಸಿ”, “ರಸ್ತೆ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಪಾಲಿಸಿ” – ಮುಂತಾದ ವಿಚಾರಗಳನ್ನು ಮೈಕ್ ಮೂಲಕ ಪ್ರಚುರಪಡಿಸುತ್ತಾ ನಗರದಲ್ಲಿ ಪೊಲೀಸರು ಜಾಗೃತಿ ರ್ಯಾಲಿ ನಡೆಸಿದರು.