News

ಭಕ್ತರಹಳ್ಳಿಯ ಬಿ.ಎನ್.ಪುಷ್ಪ ಅವರಿಗೆ ಡಾಕ್ಟರೇಟ್ ಗೌರವ

PhD Research Bhaktarahalli B N Pushpa Sidlaghatta

ತಾಲ್ಲೂಕಿನ ಭಕ್ತರಹಳ್ಳಿಯ ನಾರಾಯಣಸ್ವಾಮಿ ಅವರ ಮಗಳು ಬಿ.ಎನ್.ಪುಷ್ಪ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ “ಕುಲಾಂತರಿ ರಾಗಿ ಸಸ್ಯದ ಲವಣಾಂಶ ಸಹಿಷ್ಣುತೆಗೆ ಸಂಬಂಧಿಸಿದ ವಂಶವಾಹಿಗಳ ಅಭಿವೃದ್ಧಿ ಮತ್ತು ಗುಣಲಕ್ಷಣ” ಕುರಿತಾಗಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದು ಡಾಕ್ಟರೇಟ್ ಪಡೆದಿದ್ದಾರೆ.

 ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಶಾಲೆಯಲ್ಲಿ ಹತ್ತನೇ ತರಗತಿಯವರೆಗೂ ಓದಿದ ಬಿ.ಎನ್.ಪುಷ್ಪ, ಪಿಯುಸಿಯನ್ನು ಮಳ್ಳೂರಿನ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಓದಿದ್ದರು. ಬಿ.ಎಸ್.ಸಿ (ಎ.ಜಿ) ಹಾಸನದಲ್ಲಿ ಓದಿ, ಎಂ.ಎಸ್.ಸಿ ಮತ್ತು ಪಿ.ಎಚ್.ಡಿ ಯನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದ್ದಾರೆ. ಡಾ.ಎ.ಜಿ.ಶಂಕರ್ ಅವರ ಮಾರ್ಗದರ್ಶನದಲ್ಲಿ ಅವರು ಕುಲಾಂತರಿ ರಾಗಿ ಸಸ್ಯದ ಲವಣಾಂಶ ಸಹಿಷ್ಣುತೆಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿರುವರು.

 “ಪ್ರಸ್ತುತ ಕೃಷಿಯಲ್ಲಿ ಲವಣಾಂಶ ಮಣ್ಣು ಹೆಚ್ಚುತ್ತಿರುವುದರಿಂದ ಒಳ್ಳೆಯ ಗುಣಮಟ್ಟದ ಬೆಳೆ ಮತ್ತು ಇಳುವರಿ ಕಡಿಮೆಯಾಗುತ್ತಿದೆ. ಬಹುವಂಶವಾಹಿ ಕುಲಾಂತರಿ ರಾಗಿ ಸಸ್ಯಗಳು ಉತ್ತಮವಾದ ಲವಣಾಂಶ ಸಹಿಷ್ಣತಾ ಗುಣವನ್ನು ಹೊಂದಿರುವುದನ್ನು ಸಂಶೋಧನೆ ಮಾಡಿ, ಅದರ ಮೂಲಕ ರೈತರಿಗೆ ಉತ್ಪಾದನೆ ಹೆಚ್ಚಾಗಲು ಅನುಕೂಲವಾಗುವ ಮಾಹಿತಿಯನ್ನು ಸಂಗ್ರಹ ಮಾಡಿದ್ದೇನೆ” ಎಂದು ಭಕ್ತರಹಳ್ಳಿಯ ಬಿ.ಎನ್.ಪುಷ್ಪ ತಿಳಿಸಿದ್ದಾರೆ.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Bhaktarahalli BMV High School Environment Day

News

ಭಕ್ತರಹಳ್ಳಿ BMV ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Bhaktarahalli, Sidlaghatta : ವಿಶ್ವ ಪರಿಸರ ದಿನದ ಅಂಗವಾಗಿ ಭಕ್ತರಹಳ್ಳಿಯ BMV ವಿದ್ಯಾಸಂಸ್ಥೆಯ ಪ್ರೌಢಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ…

Share
Bhaktarahalli BMV School Guruvandana Programme

News

BMV ಶಾಲೆಯ ಹಳೆ ವಿದ್ಯಾರ್ಥಿಗಳಿಂದ ‘ಗುರುವಂದನಾ’ ಕಾರ್ಯಕ್ರಮ

Bhaktarahalli, sidlaghatta : ಬಿಎಂವಿ ಶಾಲೆಯ 2006-07ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಸುಮಾರು ಎರಡು ದಶಕಗಳ ನಂತರ ಒಂದಾಗಿ, ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Bhaktarahalli BMV Educational Trust Summer Camp

News

ರಾಷ್ಟ್ರ ಸೇವಾ ದಳದ  ಸಮಾರೋಪ ಸಮಾರಂಭ

Bhaktarahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ. ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ…

Share
Share
error: Content is protected !!