Palicherlu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿಯಲ್ಲಿ Congress ಮತ್ತು BJP ಮೈತ್ರಿ ಅಧಿಕಾರ ಹಿಡಿದಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮೀನಾವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಗಂಗರತ್ನ ದೇವರಾಜ್ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 13 ಸಂಖ್ಯಾಬಲವಿರುವ ಪಲಿಚೇರ್ಲು ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ನ 5, ಬಿಜೆಪಿಯ 5 ಹಾಗೂ ಜೆಡಿಎಸ್‌ನ 3 ಮಂದಿ ಸದಸ್ಯರಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಸದಸ್ಯರ ನೆರವಿನಿಂದ ಬಿಜೆಪಿ ಬೆಂಬಲಿತ ಮೀನಾವೆಂಕಟೇಶ್ ಅಧ್ಯಕ್ಷರಾಗಿಯೂ ಹಾಗೂ ಕಾಂಗ್ರೆಸ್ ನ ಗಂಗರತ್ನ ದೇವರಾಜ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೃಷಿ ಸಹಾಯಕ ನಿರ್ದೇಶಕ ರವಿ ಅವರು ಇವರಿಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು ಹೂ ಹಾರ ಹಾಕಿ ಅಭಿನಂದಿಸಿದರು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪಲಿಚೇರ್ಲು ಗ್ರಾ.ಪಂ.ನ ನೂತನ ಅಧ್ಯಕ್ಷೆ ಮೀನಾವೆಂಕಟೇಶ್, ಉಪಾಧ್ಯಕ್ಷೆ ಗಂಗರತ್ನದೇವರಾಜ್, ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಎಂ.ರಾಜಣ್ಣ, ಆನಂದಗೌಡ, ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ, ಕನ್ನಪನಹಳ್ಳಿ ಲಕ್ಷ್ಮೀನಾರಾಯಣರೆಡ್ಡಿ, ಪಲಿಚೇರ್ಲು ಸೋಮಶೇಖರ್‌ರೆಡ್ಡಿ, ದೇವರಾಜ್, ಗಂಗರೆಡ್ಡಿ, ಜಯರಾಮರೆಡ್ಡಿ, ಗೋಪಾಲ್, ಹರೀಶ್, ಮಣಿ, ಬಸವರಾಜ್ ಹಾಜರಿದ್ದರು.