24.1 C
Sidlaghatta
Friday, November 8, 2024

ಸ್ಕೌಟ್ಸ್  ಮತ್ತು ಗೈಡ್ಸ್ ನೂತನ ಘಟಕ ಸ್ಥಾಪನೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹೆಚ್ ಕ್ರಾಸ್ ಬಳಿ ಇರುವ ಸಾಹಿತ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನೂತನ ಘಟಕಗಳನ್ನು ಶನಿವಾರ ಉದ್ಘಾಟಿಸಲಾಯಿತು.

ನೂತನ ಘಟಕಗಳನ್ನು ಉದ್ಘಾಟಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಸಿ.ಬಿ. ಪ್ರಕಾಶ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಪ್ರತಿಯೊಂದು ಶಾಲೆಗಳಲ್ಲಿ ತೆರೆಯುವ ಮೂಲಕ ತಾಲ್ಲೂಕಿನ ಹಾಗೂ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳನ್ನು ರಾಷ್ಟ್ರದ ಸತ್ಪ್ರಜೆಗಳನ್ನಾಗಿ ರೂಪಿಸಲು ಎಲ್ಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಹಾಗೂ ಅಧಿಕಾರಿಗಳು ಸಹಕರಿಸಬೇಕೆಂದು ಕೋರಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಹೆಚ್ಚಾಗಿ ಜೀವನ ಕೌಶಲ್ಯಗಳ ತರಬೇತಿ ಇದ್ದು ಅವುಗಳನ್ನು ಪಡೆದು ಎಲ್ಲ ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶ ಸೇವೆ ಸ್ವಯಂ ಶಿಸ್ತು ಮತ್ತು ಇತರರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಶಾಲೆಯ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಹಾಗೂ ಉನ್ನತಿಗೆ ಶಾಲೆಯ ವತಿಯಿಂದ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ. ಎಲ್ಲ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಪಡೆದು ಶಾಲೆಗೆ ಮತ್ತು ಪೋಷಕರಿಗೆ ಗೌರವವನ್ನು ತರಬೇಕೆಂದು ತಿಳಿಸಿದರು.

ಪ್ರಾಂಶುಪಾಲೆ ನಳಿನಾಕ್ಷಿ, ಸ್ಕೌಟ್ ಶಿಕ್ಷಕರಾದ ನರಸಿಂಹಮೂರ್ತಿ, ಗೈಡ್ ಶಿಕ್ಷಕಿ ವಿದ್ಯಾ ಹಾಗೂ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.


New Scout and Guide Units Inaugurated at H-Cross Sidlaghatta

Sidlaghatta : On Saturday, new unit of Scouts and Guides were inaugurated at Sahitya English Medium School near H Cross in Sidlaghatta taluk. The District Secretary of Bharat Scouts and Guides, C.B. Prakash, inaugurated the new units, emphasising the importance of opening Scouts and Guides units in every school to promote good citizenship among students.

The Managing Director of the school, Ravikumar, pledged full cooperation on behalf of the school for the growth and upliftment of the students, encouraging them to acquire skills and bring respect to the school and parents. The Principal, Nalinakshi, along with scout teacher Narasimhamurthy, guide teacher Vidya, school teachers and staff, and students were present at the event.

The Scouts and Guides program offers life skills training to students, encouraging the spirit of self-discipline, self-reliance, and service to the country from a young age. By promoting these values, students can become valuable citizens of the nation.

With the inauguration of these new Scout and Guide units, students in the taluk and district will have the opportunity to acquire these valuable life skills, making a positive impact on their communities and beyond.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!