ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 12 ನಿರ್ದೇಶಕರುಗಳು ವಿಜೇತರಾಗಿದ್ದಾರೆ.
27 ವರ್ಷ ಕಾಂಗ್ರೆಸ್ ಬೆಂಬಲಿತರೇ ಆಡಳಿತವನ್ನು ನಡೆಸಿದ್ದ ಮುತ್ತೂರು ಎಂ.ಪಿ.ಸಿ.ಎಸ್ ಇದೀಗ ಜೆಡಿಎಸ್ ಬೆಂಬಲಿತರ ಕಡೆಗೆ ವಾಲಿದೆ. ನೂತನವಾಗಿ ಆಯ್ಕೆಗೊಂಡ ನಿರ್ದೇಶಕರಾದ ಪಿ.ಕೆಂಪೇಗೌಡ, ಎಂ.ಕೆ.ಪ್ರದೀಪ್, ಎಂ.ಎನ್.ಮಂಜುನಾಥ್, ಎಂ.ಎಸ್.ಮುನಿ ಕೃಷ್ಣಪ್ಪ, ಎಂ.ಜಿ.ರಮೇಶ್, ಎಂ.ಬಿ.ರವಿ, ಸೊಣ್ಣೇಗೌಡ, ವೆಂಕಟಾಚಲ, ವೆಂಕಟಲಕ್ಷ್ಮಮ್ಮ, ಶೈಲಜಾ, ಮುನಿಶಾಮಪ್ಪ ಅವರಿಗೆ ತಾಲ್ಲೂಕು ಜೆ.ವಿ.ಎಸ್ ಮುಖಂಡ ಬಿ.ಎನ್.ರವಿಕುಮಾರ್ ಅಭಿನಂದನೆಗಳನ್ನು ತಿಳಿಸಿ, ಸನ್ಮಾನಿಸಿದರು. ಸಹಕಾರ ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಅಭಿವೃದ್ಧಿ ಪಥದತ್ತ ಸಾಗುವಂತೆ ಹೇಳಿದರು.
ಈ ಸಂದರ್ಭದಲ್ಲಿ ಮುತ್ತೂರು ಗ್ರಾಮದ ಮುಖಂಡರಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈರೇಗೌಡ, ಉಪಾಧ್ಯಕ್ಷೆ ಪವಿತ್ರಾ ದೇವರಾಜ್, ಮಾಜಿ ಅಧ್ಯಕ್ಷೆ ಸುವರ್ಣ ನಾರಾಯಣಪ್ಪ, ಕೆಂಪೇಗೌಡ, ನಾರಾಯಣ ಸ್ವಾಮಿ, ಮಂಜುನಾಥ್, ಕೃಷ್ಣಪ್ಪ, ಎಸ್.ಪಿ.ರಾಜಣ್ಣ, ವಕೀಲ ರಾಜೇಂದ್ರ, ತಮ್ಮೇಗೌಡ, ಸುರೇಶ್, ಪುನೀತ್, ಮುರಳಿ, ಮಂಜುನಾಥ್ ಹಾಜರಿದ್ದರು.