20.1 C
Sidlaghatta
Friday, December 27, 2024

ದೇವರಮಳ್ಳೂರಿನಲ್ಲಿ ಮುಂದ್ಯಾವರ ಆಚರಣೆ

Munidyavara Festival Celebrated with Devotion in Sidlaghatta Taluk

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ ಮುಂದ್ಯಾವರ (ಮುನಿದ್ಯಾವರ) ಆಚರಣೆಯನ್ನು ವಿವಿದೆಡೆ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿದರು.

ಮುನಿದ್ಯಾವರ ಆಚರಣೆಯು ಶಿವರಾತ್ರಿ ಹಬ್ಬದ ನಂತರ ಶುರುವಾಗಿ, ಯುಗಾದಿ ಹಬ್ಬದ ಆರಂಭದವರೆಗೂ ಮುಂದುವರೆಯುತ್ತದೆ. ವಾರದಲ್ಲಿ ಮಂಗಳವಾರ, ಮತ್ತು ಶುಕ್ರವಾರದ ದಿನಗಳಲ್ಲಿ ಸಾಮೂಹಿಕವಾಗಿ ಆಚರಿಸಲಾಗುತ್ತದೆ.

ತಾಲ್ಲುಕಿನ ದೇವರಮಳ್ಳೂರು ಗ್ರಾಮದಲ್ಲಿ ಮಂಗಳವಾರ ಮುನೇಶ್ವೇರ ಸ್ವಾಮಿ ಮತ್ತು ಅಕ್ಕಾಯಮ್ಮ ದೇವರ ಮುಂದ್ಯಾವರ ವಿಶೇಷ ಪೂಜೆಯನ್ನು ಹಲವಾರು ಮಂದಿ ಒಗ್ಗೂಡಿ ಆಚರಿಸಿದರು.

‘ಏಳು ಮಂದಿ ಅಕ್ಕಯ್ಯಮ್ಮನವರಿಗೆ (ಹೆಣ್ಣು ದೇವರುಗಳು) ಇರುವ ಒಬ್ಬನೇ ಅಣ್ಣ ಮುನೇಶ್ವರ ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಇವರನ್ನು ಪೂಜಿಸಿ

ಸಂತೃಪ್ತಿಗೊಳಿಸುವ ಆಚರಣೆಯೇ ಇದು’ ಎಂದು ಚನ್ನಕೃಷ್ಣ ಹೇಳುತ್ತಾರೆ.

ಬಯಲುಸೀಮೆ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ತುಮಕೂರು ಭಾಗಗಳಲ್ಲಿ ಈ ಆಚರಣೆ ಹೆಚ್ಚು ಪ್ರಚಲಿತವಾಗಿದೆ.

ಆಚರಣೆಯ ಕ್ರಮ: ಏಳು ಮಂದಿ ಅಕ್ಕಯ್ಯಮ್ಮನವರನ್ನು ಪ್ರತಿನಿಧಿಸುವ ಏಳು ಕಲ್ಲುಗಳನ್ನು ತಮ್ಮ ಹೊಲಗಳಲ್ಲಿ ಅಥವಾ ಊರ ಹೊರಗೆ ನಕ್ಕಲಿ ರೆಂಬೆಗಳಿಂದ

ಗುಡಿಗಳನ್ನು ಕಟ್ಟಿ ಪೂಜಿಸುತ್ತಾರೆ. ಮುನೇಶ್ವರನನ್ನು ಪ್ರತಿನಿಧಿಸುವ ಮತ್ತೊಂದು ಕಲ್ಲನ್ನು ಇಟ್ಟು ಪೂಜಿಸುತ್ತಾರೆ.

ಊರಿಂದ ಹೊರಗೆ ಹೊಲಗದ್ದೆಗಳಿಗೆ ಹೋಗಿ ಅಲ್ಲಿಯೇ ಗುಡಿ ನಿರ್ಮಿಸಿ ಮನೆಯಿಂದ ತೆಗೆದುಕೊಂಡು ಹೋಗಿರುವ ಅಕ್ಕಿ, ಪೂಜಾ ಸಾಮಗ್ರಿಗಳನ್ನು ಬಳಸಿ ತಳಿಗೆ ತಯಾರಿಸುತ್ತಾರೆ. ಸಿದ್ಧಗೊಂಡ ತಳಿಗೆಯನ್ನು ದೇವರ ಮುಂದೆ ಎಡೆ ಹಾಕಿ ಹಾಲು ಸುರಿದು ಅರಿಶಿನ ಕುಂಕುಮ ಹಚ್ಚಿ ತೆಂಗಿನಕಾಯಿ ಒಡೆಯುವ ಮೂಲಕ ಪೂಜಿಸುತ್ತಾರೆ.

ಇದಾದ ಬಳಿಕ ದೇವರಿಗೆ ಕೋಳಿಯನ್ನೋ, ಕುರಿಯನ್ನೋ ಬಲಿ ನೀಡಿದ ನಂತರ ಪೂಜೆಯಲ್ಲಿ ಭಾಗವಹಿಸಿರುವ ಸಂಬಂಧಿಕರು, ಸ್ನೇಹಿತರಿಗೆ ಮಾಂಸಹಾರದ ಅತಿಥ್ಯ ನೀಡುವ ಮೂಲಕ ಹಬ್ಬ ಆಚರಿಸುತ್ತಾರೆ. ದೊಡ್ಡ ಮಟ್ಟದಲ್ಲಿ ಆಚರಿಸುವವರು ಕಲ್ಯಾಣ ಮಂಟಪ, ದೇವಾಲಯದ ಸಮುದಾಯ ಭವನಗಳು ಇಲ್ಲವೇ ಮನೆಗಳ ಮುಂದೆ ಬೃಹತ್ ಪೆಂಡಾಲ್ ಹಾಕಿಸುವ ಮೂಲಕವೂ ಆಚರಿಸುತ್ತಾರೆ.

ವರ್ಷಕ್ಕೊಮ್ಮೆ ಆಚರಣೆ: ಮಕ್ಕಳಿರುವ ಮನೆಗಳಲ್ಲಿ ಏನೂ ಕೇಡಾಗಬಾರದು ಎನ್ನುವ ಉದ್ದೇಶದಿಂದ ಈ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಕಡ್ಡಾಯವಾಗಿ ಈ ಆಚರಣೆ ಮಾಡಲಾಗುತ್ತದೆ. ಸುಗ್ಗಿಯ ನಂತರ ರೈತರು ಬಿಡುವಿನಿಂದ ಇರುತ್ತಾರೆ. ಹಾಗಾಗಿ ಈ ಸಂದರ್ಭದ ಆಚರಣೆಗಳಿಗೆ ಮಹತ್ವ ಹೆಚ್ಚಿದೆ. 10 ರಿಂದ 15 ದಿನಗಳ ಕಾಲ ನಡೆಯುವ ಈ ಮುನಿದ್ಯಾವರವನ್ನು ಜನರು ಒಗ್ಗೂಡಿ ಆಚರಿಸುತ್ತಾರೆ.


Munidyavara Festival Celebrated with Devotion in Sidlaghatta Taluk

Sidlaghatta : In the Sidlaghatta taluk of Karnataka, India, the Munidyavara festival was celebrated with great devotion on Tuesday. The festival, which begins after the Shivaratri festival and continues till the beginning of the Ugadi festival, is observed on Tuesdays and Fridays during the week.

The special puja of Lord Muneshwera Swami and Akkayamma Devi Munidyavara was conducted in Devaramallur village of the taluk, where a large number of people had gathered to participate in the celebration. The locals believe that Muneshwara is the only elder brother of the seven Akkaiyammas (female deities) and worship him with utmost devotion.

According to Channakrishna, a local resident, the ritual is a satisfying one, which is more prevalent in the plains parts of Kolar, Chikkaballapur, Bangalore, and rural areas of Tumkur. The ritual involves licking seven stones representing Akkayamma with twigs in their fields or outside the village. Temples are built and worshipped, and another stone representing Muneshwara is kept and worshipped.

During the celebration, a hut is built in the fields outside the town using rice and puja materials taken from home, and the prepared rice is placed in front of the god and worshiped by pouring milk, applying turmeric and saffron, and breaking coconut. After sacrificing a chicken or sheep to the God, the relatives who have participated in the puja celebrate the festival by offering meat to their friends. Celebrants on a grand scale also celebrate by placing huge pendals in front of Kalyana Mandapam, Temple Community Halls, or houses.

The ritual is performed annually with the intention of ensuring that nothing goes wrong in houses where there are children. After the harvest, farmers are free, so the importance of the celebrations on this occasion has increased. The Munidyavara festival, which lasts for 10 to 15 days, is celebrated by people together.

Overall, the Munidyavara festival is an important event in the lives of the people of the Sidlaghatta taluk and serves as a reminder of their deep-rooted cultural traditions and beliefs.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!