ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಂಸದ ಎಸ್. ಮುನಿಸ್ವಾಮಿ ಅವರು ಮಾತನಾಡಿದರು.
ಗ್ರಾಮಗಳ ಮಟ್ಟದಲ್ಲಿ ಕಡು ಬಡವರನ್ನು ಗುರ್ತಿಸಿ ಅವರಿಗೆ ಆಹಾರ ನೀಡುವ ಕೆಲಸ ಮಾಡಬೇಕು. ನಿರ್ಗತಿಕರಿಗೆ ಬಟ್ಟೆ ಹಾಗೂ ಎಲ್ಲಾ ರೀತಿಯ ಸೌಕರ್ಯ ನೀಡಬೇಕು. ದಾನಿಗಳ ನೆರವನ್ನು ಪಡೆಯಿರಿ. ಎಲ್ಲಾ ಗ್ರಾಮಗಳಲ್ಲೂ ಕೋವಿಡ್ ಕಾರ್ಯಪಡೆ ಸಕ್ರಿಯವಾಗಿ ಕೆಲಸ ಮಾಡಬೇಕು. ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು
ಹೊಟೆಲ್ ನ ಎಲ್ಲಾ ಅಡುಗೆ ಭಟ್ಟರಿಗೆ ಸ್ವಾಬ್ ಪರೀಕ್ಷೆ ಮಾಡಿಸಿ. ಎಲ್ಲರೂ ಸೇರಿ ಕಾರ್ಯನಿರ್ವಹಿಸಿದಾಗ ಕೊರೊನ ಕಡಿಮೆಯಾಗುತ್ತದೆ. ಎಲ್ಲಾ ಶಿಕ್ಷಕರನ್ನು ಎಲ್ಲಾ ಗ್ರಾಮಗಳಲ್ಲಿ ಸರ್ವೆ ಮಾಡಿಸುವ ಮೂಲಕ ಕೊರೊನ ತಡೆಗೆ ಕಾರ್ಯನಿರ್ವಹಿಸಬೇಕು. ಆಮ್ಲಜನದ ಕೊರತೆ ಉಂಟಾಗದ ಹಾಗೆ ನೋಡಿಕೊಳ್ಳಬೇಕು. ಯಾವುದೇ ಕುಂದುಕೊರತೆ ಇದ್ದರೆ ತಕ್ಷಣ ಮಾಹಿತಿ ನೀಡಿ. ಶೀಘ್ರದಲ್ಲೆ ಅವಶ್ಯಕತೆಗಳನ್ನು ಪೂರೈಸುವುದಾಗಿ ಅವರು ಬರವಸೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ರಾಜಕಾರಣವನ್ನು ಮಾಡೋಣ. ಈಗ ಏನಿದ್ದರೂ ತಾಲ್ಲೂಕನ್ನು ಕೊರೊನಾ ಮುಕ್ತವನ್ನಾಗಿಸುವ ಪ್ರಯತ್ನದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಗ್ಗೂಡಿ ಕೆಲಸ ಮಾಡೋಣ. ಏನೇ ತೊಂದರೆಗಳಿದ್ದರೂ ತಿಳಿಸಿ, ಅದನ್ನು ನಿವಾರಿಸುವ ಪ್ರಯತ್ನ ಮಾಡೋಣ. ಜನರ ಜೀವ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸೋಣ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಅವರು ಮಾತ್ರೆಗಳ ಕೊರತೆ ಇದೆ ಎಂದು ತಿಳಿಸಿದರು. ತಕ್ಷಣ ಪೂರೈಕೆಗೆ ವ್ಯವಸ್ಥೆ ಮಾಡುವುದಾಗಿ ಸಂಸದರು ಬರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಹಾಸಿಗೆಗಳ ಕೊರತೆ ಉಂಟಾಗಬಹುದು ಎಂದು ವೈದ್ಯಾಧಿಕಾರಿ ಹೇಳಿದರು.
ಕೊರೊನ ರೋಗಿಗಳ ಹತ್ತಿರ ಧೈರ್ಯ ತುಂಬುವಂತೆ ನಡೆದುಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ತಾಲ್ಲೂಕು ಕೇಂದ್ರದಲ್ಲಿಯೇ ಉಳಿಯಬೇಕು. ತಾಲ್ಲೂಕನ್ನು ಕೊರೊನ ಮುಕ್ತವಾಗಿ ಮಾಡಬೇಕು. ಸಾರ್ಕಾರಿ ಅಧಿಕಾರಿಗಳಿಗೆ ತೊಂದರೆ ಯಾಗದಂತೆ ಪೊಲೀಸ್ ಅಧಿಕಾರಿಗಳು ನೋಡಿಕೊಳ್ಳಬೇಕು. ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಯಲ್ಲಿ ಕೆಲಸ ನಡೆಸಿ ಸ್ವಲ್ಪ ಸಮಯ ಗ್ರಾಮಗಳಲ್ಲಿ ಸೇವೆ ಮಾಡಬೇಕೆಂದರು.
ಸಂಸದ ಎಸ್. ಮುನಿಸ್ವಾಮಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳು, ಲಸಿಕೆ, ಚಿಕಿತ್ಸೆ, ಆಮ್ಲಜನಕದ ಸಿಲಿಂಡರ್, ಕೋವಿಡ್ ಅಲ್ಲದೆ ಇತರ ರೋಗಗಳಿಗೆ ನೀಡುತ್ತಿರುವ ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದರು.
ಉಪವಿಭಾಧಿಕಾರಿ ರಘುನಂದನ್, ತಹಶೀಲ್ದಾರ್ ರಾಜೀವ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ, ಇಒ ಚಂದ್ರಕಾಂತ್, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್ ಹಾಜರಿದ್ದರು.
1166 ಕೊರೊನ ಪ್ರಕರಣಗಳು ತಾಲ್ಲೂಕಿನಲ್ಲಿ ಇದೆ.
22 ಮರಣವಾಗಿದೆ.
32202 ಜನರಿಗೆ ಲಸಿಕೆ ಹಾಕಲಾಗಿದೆ.
4 ಮಂದಿ ವೈದ್ಯರಿಗೆ ಕೊರೊನಾ ಬಂದಿತ್ತು.
ಒಬ್ಬ ರೋಗಿಗೆ 1 ಸಿಲಿಂಡರ್ ಬೇಕಾಗುತ್ತದೆ.
40 ಬೆಡ್ ಗಳು ಇವೆ.
ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 41 ಕೊರೊನ ರೋಗಿಗಳು ದಾಖಲಾಗಿದ್ದಾರೆ.
264 ಗ್ರಾಮಗಳಲ್ಲಿ ಕಾರ್ಯಪಡೆ ಇದೆ.
ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ ಮಾಹಿತಿ ನೀಡಿದರು.