17.1 C
Sidlaghatta
Friday, November 22, 2024

ಶಿಡ್ಲಘಟ್ಟದಲ್ಲಿ “ಕಬ್ಜ” ಚಲನಚಿತ್ರದ ಆಡಿಯೋ ಬಿಡುಗಡೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ “ಕಬ್ಜ” ಚಲನಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಾಗಿ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಕ್ರೀಡಾಂಗಣದಲ್ಲಿ ಹಾಜರಿದ್ದರು. ಸುತ್ತಮುತ್ತಲಿನ ಕಟ್ಟಡಗಳ ಮೇಲೆಲ್ಲಾ ಹತ್ತಿ ಕುಳಿತು ಜನರು ಕಾರ್ಯಕ್ರಮವನ್ನು ವೀಕ್ಷಿಸಿದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ನಟಿ ಶ್ರೇಯಾ ಶರಣ್ ಮುಂತಾದ ಚಲನಚಿತ್ರ ತಾರೆಯರನ್ನು ಕಂಡು ಶಿಡ್ಲಘಟ್ಟದ ಜನರು ಸಂತಸ ವ್ಯಕ್ತಪಡಿಸಿದರು.

“ಕಬ್ಜ” ಚಲನಚಿತ್ರದ ಆಡಿಯೋ ಬಿಡುಗಡೆ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಮತ್ತುವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿ, “ಕನ್ನಡ ಚಲನಚಿತ್ರಗಳನ್ನು ದೇಶದ ಇತರೆ ರಾಜ್ಯಗಳ ಜನರು ಮೆಚ್ಚುಗೆ ವ್ಯಕ್ತಪಡಿಸುವ ರೀತಿಯಲ್ಲಿ ಬೆಳೆಯುತ್ತಿರುವುದು ಸಂತಸದ ವಿಷಯ. ವಿವಿಧ ಭಾಷೆಗಳಲ್ಲಿ ಏಕಕಾಲದಲ್ಲಿ “ಕಬ್ಜ” ಸಿನಿಮಾ ಬಿಡುಗಡೆಯಾಗುತ್ತಿದೆ. ಯಶಸ್ಸ್ವಿಯಾಗಲಿ” ಎಂದು ಹಾರೈಸಿದರು.

ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ಪರಿಶ್ರಮ ನೀಟ್ ಅಕಾಡೆಮಿಯ ಪ್ರದೀಪ್ ಈಶ್ವರ್ ಮಾತನಾಡಿದರು.

ಚಲನಚಿತ್ರದ ನಿರ್ಮಾಪಕರಾದ ಸೀಕಲ್ ರಾಮಚಂದ್ರೇಗೌಡ, ಆನಂದ್ ಪಂಡಿತ್, ಅಲಂಕಾರ್ ಪಾಂಡ್ಯನ್, ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ನಿರ್ದೇಶಕ ಆರ್.ಚಂದ್ರು, ಮಾಜಿ ಸಚಿವ ಎಚ್.ಎಂ.ರೇವಣ್ಣ ಹಾಜರಿದ್ದರು.


Grand Audio Launch of Movie “Kabzaa” at Nehru Stadium

Sidlaghatta : The Nehru Stadium in Sidlaghatta town hosted a grand audio launch event for the movie “Kabzaa” on Sunday evening. The event featured various entertainment programs and drew a crowd of thousands of people. Many attendees watched the event while seated on the surrounding buildings.

The people of Sidlaghatta were thrilled to see popular film stars such as Shivraj Kumar, Upendra, and Shreya Sharan in attendance.

Dr. Sudhakar, the Health and Family Welfare Department and Medical Education Minister, who released the movie’s audio, expressed his delight in seeing Kannada movies gaining recognition beyond the state’s borders. He also noted that “Kabzaa” would be released simultaneously in different languages and wished the movie success.

During the event, actors Shivraj Kumar and Upendra, as well as Pradeep Eshwar of Parishrama NEET Academy, took to the stage to speak. The film’s producers, Seikal Ramachandre Gowda, Anand Pandit, and Alankar Pandyan, as well as MLA V. Muniyappa, former MLA M. Rajanna, director R. Chandru, and former minister H. M. Revanna, were also in attendance.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!