19.1 C
Sidlaghatta
Friday, November 8, 2024

ಎತ್ತಿನಹೊಳೆ ಯೋಜನೆಯಡಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಭಮಿಪೂಜೆ

MLA V. Muniyappa urges government and people's representatives to prioritize development work based on the desires of the common people.

- Advertisement -
- Advertisement -

Melur, Sidlaghatta : ಸರ್ಕಾರ ಯಾವುದೆ ಇರಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕೆನ್ನುವುದು ಸಾಮಾನ್ಯ ಜನರ ಅಭಿಲಾಷೆ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಸರ್ಕಾರದ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಶಾಸಕ ಎ.ಮುನಿಯಪ್ಪ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿಯ ಚೌಡಸಂದ್ರ ಗ್ರಾಮದ ಗೇಟ್ ಬಳಿಯಿಂದ ಓವರ್ ಹೆಡ್ ಟ್ಯಾಂಕ್ ವರೆಗೆ ಎತ್ತಿನಹೊಳೆ ಯೋಜನೆಯಡಿ 40 ಲಕ್ಷ ರೂ.ಗಳು ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕೆಎಲ್‌ ಐಡಿಪಿ ಯೋಜನೆಯಡಿ 5 ಲಕ್ಷ ರೂ.ಗಳ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಒತ್ತು ಕೊಡದೆ ಧರ್ಮ ಆಧಾರಿತ ವಿಷಯಗಳಿಗೆ ಹೆಚ್ಚು ಒತ್ತು ಕೊಡುತ್ತಿರುವ ಕಾರಣ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದಾಗ ಜನರು ನಾವಾಯಿತು ನಮ್ಮ ಪಾಲಾಯಿತು ಎನ್ನುವಂತೆ ನಡೆದುಕೊಳ್ಳದೆ ಜನರೂ ಸಹ ಜವಾಬ್ದಾರಿಯುತವಾಗಿ ಕಾಮಗಾರಿಯ ಗುಣಮಟ್ಟ ಹಾಗೂ ಅದರ ಉಪಯೋಗದ ಬಗ್ಗೆ ಗಮನ ಹರಿಸುವ ಮೂಲಕ ಕಾಮಗಾರಿ ಶಾಶ್ವತವಾಗಿ ಇರುವಂತೆ ನಿಗಾವಹಿಸಬೇಕೆಂದು ಮನವಿ ಮಾಡಿದರು.

ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಮುತ್ತೂರು ಚಂದ್ರೇಗೌಡ, ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್, ಚೌಡಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಡೇರಿ ಅಧ್ಯಕ್ಷ ನಾಗೇಶ್, ಬಿ.ಎಂ.ವೆಂಕಟರೆಡ್ಡಿ, ಮೇಲೂರು ಮುರಳಿ, ಸಿ.ಎಂ.ಮುನಿಯಪ್ಪ, ಜಯರಾಂ,ಸಿ.ಎಂ. ಆಂಜನೇಯರೆಡ್ಡಿ, ಗುತ್ತಿಗೆದಾರ ಸಿ.ಎನ್.ಮಹೇಶ್, ಆನಂದ್, ರಾಮಾಂಜಿನಪ್ಪ, ರಾಜಣ್ಣ,ರಾಮಚಂದ್ರಪ್ಪ, ಪಿ.ನರಸಿಂಹಮೂರ್ತಿ, ಮುರಳಿ ಹಾಜರಿದ್ದರು.


MLA Muniyappa Emphasizes Importance of Development Work for Common People

Melur, Sidlaghatta : MLA V. Muniyappa has emphasized the responsibility of the government and people’s representatives to prioritize development work based on the desires of the common people, regardless of the government’s stance. His comments were made after performing the Bhoomi Puja ceremony for the construction of a cement road under the Yettinahole project and KL IDP project, costing Rs. 40 lakhs and Rs. 5 lakhs, respectively. The road will stretch from the Sri Anjaneyaswamy temple near the gate of Choudasandra village of Sidlaghatta taluk to the overhead tank.

MLA Muniyappa expressed regret that the development works were not being carried out as expected due to the BJP government’s lack of emphasis on development and more emphasis on religion-based issues. He urged people to pay attention to the quality and purpose of the development work, rather than viewing it as their share.

Several dignitaries were present at the event, including Hop Comms ex-president Muttur Chandragowda, Meluru gram panchayat ex-president Manjunath, Chaudasandra gram panchayat member Narayanaswamy, Dairy president Nagesh, B.M.Venkatareddy, Meluru Murali, C.M.Muniappa, Jayaram, C.M. Anjaneyareddy, contractor CN Mahesh, Anand, Ramanjinappa, Rajanna, Ramachandrappa, P. Narasimhamurthy, and Murali.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!